ರಥೋತ್ಸವದ ವೇಳೆ ವ್ಯಕ್ತಿಯೊಬ್ಬ ರಥದ ಚಕ್ರಕ್ಕೆ ಸಿಲುಕಿ ಮೃತ

ಕಲಬುರ್ಗಿ, ಮಾ.19- ರಥೋತ್ಸವದ ವೇಳೆ ವ್ಯಕ್ತಿಯೊಬ್ಬ ರಥದ ಚಕ್ರಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ಸಂಭವಿಸಿದೆ.
ಜಿಲ್ಲೆಯ ಪ್ರಸಿದ್ಧ ಶಿವಲಿಂಗೇಶ್ವರ ರಥೋತ್ಸವದ ವೇಳೆ ಈ ದುರ್ಘಟನೆ ನಡೆದಿದ್ದು, 48 ವರ್ಷದ ವ್ಯಕ್ತಿ ಅಸುನೀಗಿದ್ದಾನೆ.

ರಥ ಮೆರವಣಿಗೆ ವೇಳೆ ಆಕಸ್ಮಿಕವಾಗಿ ವ್ಯಕ್ತಿ ಕೆಳಗೆ ಇದ್ದಾಗ ಆತನ ಮೇಲೆ ಚಕ್ರ ಹರಿದು ಈ ದುರಂತ ಸಂಭವಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ