ದೆಹಲಿಯಲ್ಲಿ ಎಐಸಿಸಿ ಮಹಾಧಿವೇಶನ:

ದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಐಸಿಸಿ ಮಹಾಧಿವೇಶನವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನ ಭಾಷಣದಲ್ಲಿ,  ಕೆಂದ್ರದ ಎನ್‍ಡಿಎ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಸರ್ಕಾರ ದೇಶದಲ್ಲಿ ದ್ವೇಶ  ರಾಜಕಾರಣ ಮಾಡುತ್ತಿದೆ, ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಪಲವಾಗಿದೆ, ರ್ಯತೆರಿಗೆ ಅವರು ಬೆಳೆದ ಬೆಳೆಗಳಿಗೆ ಒಳ್ಳೆಯ ದರ ಸಿಗುತ್ತಿಲ್ಲ  ಎಂದು ಹೇಳಿದರು. ಕಾಂಗ್ರೇಸ್ ಪಕ್ಷ ಒಂದೇ ದೇಶದ ಏಕತೆ ಮತ್ತು ದೇಶದ ಅಭಿವೃಧ್ದಿಗಾಗಿ ಹೊರಾಟ ಮಾಡಿತ್ತಿದೆ ಎಂದು ಹೇಳಿದರು. ಬಿಜೆಪಿಯವರು ದ್ವೇಶ ಮತ್ತು ಕೋಪವನ್ನು ಹರಡುತ್ತಿದ್ದಾರೆ, ಅದರೆ ನಾವು ಪ್ರೀತಿ ಮತ್ತು ಭಾತೃತ್ವವನ್ನು ಹರಡುತ್ತೇವೆ ಎಂದು ಹೇಳಿದರು.
ಕಾಂಗ್ರೇಸ್ ಪಕ್ಷದ ಹಿಂದಿನ ಸಂಪ್ರದಾಯ ಮತ್ತು ಪರಂಪರೆಯಂತೆ ಹಿರಿಯರು ಮತ್ತು ಯುವಕರನ್ನು ಒಟ್ಟಿಗೆ ಕರೆದೊಯ್ಯಲಾಗುವುದು  ಎಂದು ಹೇಳಿದರು. ಯುವಕರು ಮತ್ತು ಹಿರಯರು ಒಗ್ಗಟ್ಟಾಗಿ ದೇಶವನ್ನು ಹೊಸ ದಿಕ್ಕಿನತ್ತ ಕರೆದೊಯ್ಯುವುದಾಗಿ ಹೇಳಿದರು. ದೇಶದ
ಕೊಟ್ಯಾಂತರ ಯುವಕರು ಉದ್ಯೊಗಕ್ಕಾಗಿ ಮೋದಿಯತ್ತ ನೋಡುತ್ತಿದ್ದಾರೆ, ಅದರೆ ಯಾವುದೇ ಉದೋಗ ಸೃಷ್ಟಿಯಾಗಿಲ್ಲ,  ಅವರು ಬೆಳೆದ ಬೆಳೆಗೆ ಒಳ್ಳೆಯ ದರ ಸಿಗುತ್ತಿಲ್ಲ ಎಂದು ಹೇಳಿದರು. ಈ ದೇಶ ಎಲ್ಲರಿಗೂ ಸೇರಿದೆ ಎಲ್ಲಾ ಧರ್ಮ, ಎಲ್ಲಾ  ಜಾತಿಯವರನ್ನು ಜೊತೆಯಲ್ಲಿ ಕರದೊಯ್ಯುವ ಕೆಲಸವನ್ನು ಕಾಂಗ್ರೇಸ್ ಮಾಡುತ್ತದೆ ಎಂದು ಹೇಳಿದರು.
ಎಐಸಿಸಿ ಮಹಾಧಿವೇಶನದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಕೇಂದ್ರದ ಮೋದಿ ಸರ್ಕಾರದ ಯೋಜನೆಗಳು ಕೇವಲ ಭ್ರಮೆಯಷ್ಟೆ, ಪ್ರಧಾನಿ ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೇಸ್ ಒಂದು ರಾಜಕೀಯ ಪಕ್ಷವಲ್ಲ ಒಂದು ಆಂದೋಲನ,  ಕಾಂಗ್ರೇಸ್ ನೀತಿಗಳನ್ನು ಬಿಜೆಪಿ ದುರ್ಭಲಗೊಳುಸುತ್ತಿದೆ ಎಂದು ಹೇಳಿದರು. ಮೋದಿ ಸರ್ಕಾರ ಕೇವಲ ದ್ವೇಶದ ರಾಜಕಾರಣ ಮಾಡುತ್ತಿದೆ, ಪ್ರಧಾನಿ ಹೇಳಿದಂತೆ ಯಾವುದೇ ಅಭಿವೃಧ್ದಿಯು ಆಗಿಲ್ಲ ಎಂದು ಹೇಳಿದರು. ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ನೆನಪಿಸಿದ ಸೋನಿಯಾ ಗಾಂಧಿ, ಕರ್ನಾಟಕದ ಚಿಕ್ಕಮಗಳೂರು ಇಂದಿರಾ ಗಾಂಧಿಯವರಿಗೆ 1977ರಲ್ಲಿ ರಾಜಕೀಯ ಪುನರ್ಜನ್ಮ ನೀಡಿತ್ತು, ಅದೇ ರೀತಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೇಸ್ ಬೆಂಬಲಿಸುವಂತೆ ತಮ್ಮ ಭಾಷಣದಲ್ಲಿ  ಹೇಳಿದರು.
ಎಐಸಿಸಿ ಆಧಿವೇಶನದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದಾರಾಮಯ್ಯ, ರಾಹುಲ್ ಗಾಂಧಿ ಇನ್ನೂ ಯುವಕರಾಗಿರುವದರಿಂದ ದೂರದೃಷ್ಟಿ ಹೊಂದಿದ್ದಾರೆ ಎಂದು ಹೇಳಿದರು. ತಮ್ಮ ಭಾಷಣದಲ್ಲಿ ಕಾಯಕವೇ ಕ್ಯೆಲಾಸ ಎಂದ ಸಿ.ಎಂ.,
ಕರ್ನಾಟಕ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು. ಅನ್ನಭಾಗ್ಯ ಯೋಜನೆ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ, ನಮ್ಮದು ಮಾದರಿ ಸರ್ಕಾರ, ರ್ಯೆತರ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳಿದರು. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಜಾತ್ಯತೀತತೆ ಮತ್ತು ಕೋಮುವಾದಿಗಳ ನಡುವೆ ನೆಡೆಯಲಿದೆ, ಇಡೀ ದೇಶ ಈಗ ಕರ್ನಾಟಕ ಚುನಾವಣೆಯತ್ತ ನೋಡುತ್ತಿದೆ ಎಂದು ಹೇಳಿದರು. 2019 ರಲ್ಲಿ ನೆಡೆಯುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಪ್ರಧಾನಿಯಾಗುವದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ