ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ನಾಯಕರು ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸುತ್ತಿದ್ದಾರೆ: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಮಾ.10- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ನಾಯಕರು ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಎಂದು ಒತ್ತಾಯಿಸುತ್ತಿದ್ದು, ಅನಗತ್ಯವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಗೂಂಡಾರಾಜ್ಯ ಎಂದು ಸುಳ್ಳು ಆರೋಪ ಮಾಡಿ ಕರ್ನಾಟಕಕ್ಕೆ ಕಪ್ಪು ಮಸಿ ಬಳಿಯುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾಯದರ್ಶಿ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ರಾಷ್ಟ್ರೀಯ ಅಪರಾಧಗಳ ಅಂಕಿ-ಅಂಶಗಳ ಮಾಹಿತಿ ಪ್ರಕಾರ ಕರ್ನಾಟಕ 10ನೇ ಸ್ಥಾನದಲ್ಲಿದೆ. ಅದಕ್ಕೂ ಮೊದಲು 9ನೆ ಸ್ಥಾನದಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯಗಳಿವೆ. ಲೋಕಾಯುಕ್ತರ ಮೇಲಿನ ದಾಳಿಯನ್ನೇ ನೆಪವಾಗಿಟ್ಟುಕೊಂಡು ಗೂಂಡಾ ರಾಜ್ಯ ಎಂದು ಹೇಳುತ್ತಿರುವುದು ಸರಿಯಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ, ಉಸ್ತುವಾರಿ ಪ್ರಕಾಶ್ ಜಾವಡೇಕರ್ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.
ಶಾಸಕರ ಪುತ್ರ ನಮಪಾಡ್, ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಅವರ ಪ್ರಕರಣಗಳಲ್ಲಿ ನಮ್ಮ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಂಡಿದೆ. ಆದರೆ, ಬಿಜೆಪಿ ನಾಯಕರ ಗೂಂಡಾಗಿರಿ, ನೈತಿಕತೆ, ಭ್ರಷ್ಟಾಚಾರಗಳು ಹೆಚ್ಚಾಗಿವೆ. ವೈದ್ಯರ ಮೇಲೆ ಹಲ್ಲೆ ನಡೆಸಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕರ್ನಾಟಕವನ್ನು ಗೂಂಡಾ ರಾಜ್ಯ ಎಂದು ಹೇಳುತ್ತಿದ್ದಾರೆ. ಚೆಕ್‍ನಲ್ಲಿ ಲಂಚ ತೆಗೆದುಕೊಂಡ ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಈ ಹಿಂದೆ ಬಿಜೆಪಿ ಆಡಳಿತ ಇದ್ದಾಗ ಕರ್ನಾಟಕದಲ್ಲಿ ಪೆÇಲೀಸರಿಗೆ ಕೆಲಸವೇ ಇರಲಿಲ್ಲ. ಕರಾವಳಿಯಲ್ಲಿ ನೈತಿಕ ಪೆÇಲೀಸ್ ಗಿರಿ ಇತ್ತು. ಬಳ್ಳಾರಿಯಲ್ಲಿ ಮುಖ್ಯಮಂತ್ರಿಯೇ ಕಾಲಿಡಲಾಗದಷ್ಟು ಭಯದ ವಾತಾವರಣ ಇತ್ತು. ಇವರು ಗೂಂಡಾ ರಾಜ್ಯದ ಬಗ್ಗೆ ಮಾತನಾಡುತ್ತಾರೆ. ಹಿಂದುಗಳ ಹತ್ಯೆಯಲ್ಲೂ ಜನರನ್ನು ದಾರಿ ತಪ್ಪಿಸುವ ಆರೋಪಗಳನ್ನು ಬಿಜೆಪಿಯವರು ಮಾಡುತ್ತಿದ್ದಾರೆ. 23 ಹತ್ಯೆಗಳಲ್ಲಿ 14 ಹತ್ಯೆಗಳಲ್ಲಿ ಹಿಂದುಗಳೇ ಭಾಗಿಯಾಗಿದ್ದಾರೆ. ಉಳಿದವು ವೈಯಕ್ತಿಕ ದ್ವೇಷಗಳ ಹಿನ್ನೆಲೆಯಲ್ಲಿ ನಡೆದಿವೆ. ಹರೀಶ್‍ಪೂಜಾರಿ, ಪ್ರವೀಣ್‍ಪೂಜಾರಿ ಬಿಜೆಪಿ ನಾಯಕರಾಗಿದ್ದು, ಹಿಂದು ಸಂಘಟನೆ ಮುಖಂಡರುಗಳೇ ಹತ್ಯೆ ಮಾಡಿದ್ದಾರೆ. ಜನರಲ್ಲಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ