ಕಾರು ತೆಗೆದುಕೊಳ್ಳಲು ಲೋನ್ ಪಡೆಯುವ ಸಲುವಾಗಿ ಬ್ಯಾಂಕ್‍ವೊಂದಕ್ಕೆ ನಕಲಿ ದಾಖಲೆಗಳನ್ನು ನೀಡಿದ್ದ ಪ್ರಕರಣ

ಬೆಂಗಳೂರು,ಮಾ.10- ಕಾರು ತೆಗೆದುಕೊಳ್ಳಲು ಲೋನ್ ಪಡೆಯುವ ಸಲುವಾಗಿ ಬ್ಯಾಂಕ್‍ವೊಂದಕ್ಕೆ ನಕಲಿ ದಾಖಲೆಗಳನ್ನು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಎಂಸಿಯಾರ್ಡ್ ಪೆÇಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಮನೋಜ್(40) ಮತ್ತು ಈತನ ಕೃತ್ಯಕ್ಕೆ ಸಹಕರಿಸಿದ ನಾಗಶ್ರೀ ಎಂಬ ಮಹಿಳೆಯನ್ನು ಪೆÇಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರಂನಲ್ಲಿ ವಾಸವಾಗಿರುವ ಮನೋಜ್ ಪಬ್‍ವೊಂದನ್ನು ನಡೆಸುತ್ತಿದ್ದು , ಇತ್ತೀಚೆಗೆ ಆಡಿ ಕಾರು ತೆಗೆದುಕೊಳ್ಳಲು ಲೋನ್ ಬೇಕೆಂದು ಆರ್‍ಎಂಸಿಯಾರ್ಡ್‍ನಲ್ಲಿರುವಂತಹ ಬ್ಯಾಂಕ್ ಆಫ್ ಬರೋಡ ಬ್ಯಾಂಕ್‍ಗೆ ನಕಲಿ ದಾಖಲೆಗಳನ್ನು ಕೊಟ್ಟಿದ್ದರು.
ಬ್ಯಾಂಕ್‍ನಿಂದ 37 ಲಕ್ಷ ಲೋನ್ ಸಹ ಮನೋಜ್‍ಗೆ ಸಿಕ್ಕಿದೆ. ತದನಂತರ ಬ್ಯಾಂಕ್ ಮ್ಯಾನೇಜರ್ ಮನೋಜ್ ಲೋನ್‍ಗಾಗಿ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಇವು ನಕಲಿ ದಾಖಲೆ ಎಂಬುದು ತಿಳಿದುಬಂದಿದೆ.
ತಕ್ಷಣ ಬ್ಯಾಂಕ್ ಮ್ಯಾನೇಜರ್ ಆರ್‍ಎಂಸಿಯಾರ್ಡ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ತನಿಖೆ ನಡೆಸಿ ಮನೋಜ್‍ನನ್ನು ಬಂಧಿಸಿದ್ದಾರೆ.
ಅಲ್ಲದೆ ಈತನ ಕೃತ್ಯಕ್ಕೆ ಸಹಕರಿಸಿದ ನಾಗಶ್ರೀ ಎಂಬ ಮಹಿಳೆಯನ್ನು ಸಹ ಬಂಧಿಸಲಾಗಿದೆ.
ಕನ್ನಡದ ನಟಿಯೊಬ್ಬರ ಸಹೋದರನಾಗಿರುವ ಮನೋಜ್ ಖಾತೆಯಿಂದ ನಟಿಯ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆಯೂ ತನಿಖೆ ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ