ಸಂಘಟನೆಗಳು, ಸಾರ್ವಜನಿಕರು ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ: ನಟಿ ಭಾರತಿ ವಿಷ್ಣುವರ್ಧನ್ ಹರ್ಷ

ಸಂಘಟನೆಗಳು, ಸಾರ್ವಜನಿಕರು ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ: ನಟಿ ಭಾರತಿ ವಿಷ್ಣುವರ್ಧನ್ ಹರ್ಷ
ಬೆಂಗಳೂರು, ಮಾ.8- ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹರ್ಷ ವ್ಯಕ್ತಪಡಿಸಿದರು.
ಪರಿಹಾರ ಸಂಯೋಜನೆ ಅಡಿಯಲ್ಲಿ ವನಿತಾ ಸಹಾಯವಾಣಿ ಮತ್ತು ಬೆಂಗಳೂರು ನಗರ ಪೆÇಲೀಸರ ಸಹಯೋಗದಲ್ಲಿ ಪೆÇಲೀಸ್ ಕಮಿಷನರ್ ಕಚೇರಿ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಮತ್ತು ಮಕ್ಕಳ ಸಮ್ಸಯೆ ಹಿಂದಿನಿಂದಲೂ ಇದೆ. ಆದರೆ, ಇದೀಗ ಸಂಘಟನೆಗಳು, ಸಾರ್ವಜನಿಕರು ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಆದರೂ ಮಹಿಳೆಯರು ಒಂದಲ್ಲ ಒಂದು ರೀತಿ ತೊಂದರೆಗೊಳಗಾಗುತ್ತಿರುವುದು ಆತಂಕಕಾರಿ ಎಂದರು.
ಬೆಂಗಳೂರು ಪೆÇಲೀಸರು ಹಾಗೂ ವನಿತಾ ಸಹಾಯವಾಣಿಯು ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ಮುಂದಾಗುತ್ತಿರುವುದು ಸ್ವಾಗತಾರ್ಹ ಎಂದರು.
ನಗರ ಪೆÇಲೀಸ್ ಆಯುಕ್ತರಾದ ಸುನಿಲ್‍ಕುಮಾರ್ ಮಾತನಾಡಿ, ಬೆಂಗಳೂರು ನಗರದಲ್ಲಿ ಮಹಿಳೆಯರು ಯಾವುದೇ ರೀತಿಯ ದೂರು ನೀಡಿದರೂ ಸ್ವೀಕರಿಸಲೇಬೇಕೆಂದು ಎಲ್ಲ ಠಾಣೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಮೊದಲು ದೂರುಗಳನ್ನು ಸ್ವೀಕರಿಸಿ, ನಂತರ ತನಿಖೆಗೆ ಒಳಪಡಿಸಿದ ಮೇಲೆ ಸತ್ಯಾಸತ್ಯತೆ ಪರಾಮರ್ಶೆ ನಡೆಸಲಾಗುವುದು, ಪೆÇಲೀಸ್ ಠಾಣೆಗೆ ಬರುವ ಅಥವಾ ತಮ್ಮ ಕಚೇರಿಗೆ ಬರುವ ನೊಂದ ಮಹಿಳೆಗೆ ನಿರಾಸೆಯಿಂದ ವಾಪಸ್ ಹೋಗದಂತೆ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಮಹಿಳಾ ಸಹಾಯವಾಣಿಯ ಕಾರ್ಯ ವೈಖರಿಯನ್ನು ಆಯುಕ್ತರು ಮತ್ತು ಹಿರಿಯ ಪೆÇಲೀಸ್ ಅಧಿಕಾರಿಗಳು ಶ್ಲಾಘಿಸಿದರು.
ವನಿತಾ ಸಹಾಯವಾಣಿಯ ಆಡಳಿತ ವ್ಯವಸ್ಥೆ ನೋಡಿಕೊಳ್ಳುವ ಹೆಚ್ಚುವರಿ ಪೆÇಲೀಸ್ ಆಯುಕ್ತರಾದ ಎಂ.ನಂಜುಂಡಸ್ವಾಮಿ, ಮಹಿಳೆಯರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹಿಳಾ ಸಹಾಯವಾಣಿಗೆ ಬೆಂಗಳೂರು ಪೆÇಲೀಸ್ ಕಮಿಷನರ್ ವತಿಯಿಂದ ಸಾಧ್ಯವಾಗುವ ಎಲ್ಲ ರೀತಿಯ ಆರ್ಥಿಕ ಮತ್ತು ಆಡಳಿತ ಸಹಕಾರವನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಹೆಚ್ಚುವರಿ ಪೆÇಲೀಸ್ ಆಯುಕ್ತರಾದ ಸೀಮಂತ್‍ಕುಮಾರ್, ವನಿತಾ ಸಹಾಯವಾಣಿ ಮುಖ್ಯಸ್ಥರಾದ ರಾಣಿ ಶೆಟ್ಟಿ, ಹಿರಿಯ ಕೌನ್ಸಿಲರ್‍ಗಳಾದ ಸರಸ್ವತಿ, ಉಮಾ, ಅಪರ್ಣಾ, ಇಸ್ಮಾಯಿಲ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ