” ಅತಿಥಿ ದೇವೊ ಭವ” ಮತ್ತು ” ಹಸಿದವರಿಗೆ ಮುಷ್ಠಿ ಅನ್ನ” – ಕೆನರಾ ಗುರುಕುಲದ ಕಾಯಕ

ಬೆಂಗಳೂರು/ಆನೇಕಲ್: ಕೆನರಾ ಶಿಕ್ಷಣ ಸಂಸ್ಥೆಯ ಕೆನರಾ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ‘ಉನ್ನತ ಮೌಲ್ಯದೊಡನೆ ಉತ್ತಮ ಶಿಕ್ಷಣ’ ಧ್ಯೇಯ ವಾಕ್ಯದೊಂದಿಗೆ ಶಾಲೆಯಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕøತಿ ಮತ್ತು ಸನಾತನ ಮೌಲ್ಯಗಳನ್ನು ಪಠ್ಯದ ಜೊತೆಗೆ ಕಲಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ವಾರ “ಅತಿಥಿ ದೇವೊ ಭವ” ಎನ್ನುವ ವಿಶೇಷ ಕಾರ್ಯಕ್ರಮವನ್ನು ಮಾಡುತ್ತಿದೆ. ಇದರ ಉದ್ದೇಶ ಅತಿಥಿಗಳಿಗೆ ಮನ್ನಣೆ ನೀಡಿ ಅವರನ್ನು ಗೌರವಿಸುವ ಮೌಲ್ಯವನ್ನು ಬೆಳೆಸುವುದು ಹಾಗೂ ಅವರು ಮಾಡಿದ ಸಾಧನೆಗಳನ್ನು ಮಕ್ಕಳಿಗೆ ತಿಳಿಸಿ ಸ್ಪೂರ್ತಿ ನೀಡುವುದು.
ಈ ಕಾರ್ಯಕ್ರಮಕ್ಕೆ ಆನೇಕಲ್ ತಾಲ್ಲೂಕನ್ನು ಆಯ್ಕೆ ಮಾಡಿಕೊಂಡು ಇಲ್ಲಿನ ಪ್ರತಿ ಸಾಧಕರನ್ನು ಗುರುತಿಸಿ ಪ್ರತಿವಾರ ಒಬ್ಬ ಸಾಧಕರನ್ನು ಆಹ್ವಾನಿಸಿ ಅವರ ಸಾಧನೆಗಳನ್ನು ಮಕ್ಕಳಿಗೆ ಮತ್ತು ಪೋಷಕರಿಗೆ ತಿಳಿಸುವುದು. ಅವರನ್ನು ಗೌರವಿಸುವುದು.
ಈ ಕಾರ್ಯಕ್ರಮದ ಜೊತೆಗೆ ಮಕ್ಕಳಿಗೆ ದಯೆ, ದಾನ ಹಾಗೂ ಪ್ರೀತಿಯ ಪರಿಕಲ್ಪನೆಯನ್ನು ಬಿತ್ತುವ ಕಾಯಕವನ್ನು ಸಹ ಸಂಸ್ಥೆ ಮಾಡುತ್ತಿದೆ.
” ಹಸಿದವರಿಗೆ ಮುಷ್ಠಿ ಅನ್ನ” ಎನ್ನುವ ಧ್ಯೇಯದೊಂದಿಗೆ ಮುಷ್ಠಿ ಅಕ್ಕಿಯನ್ನು ದಾನ ಮಾಡುವ ಮನೋಭಾವನೆಯನ್ನು ಮಕ್ಕಳಿಗೆ ಮೈಗೂಡಿಸುತ್ತಿದೆ. ಶಾಲೆಯ ಪ್ರತಿ ಮಗೂ, ಪ್ರತಿವಾರ ಒಂದು ಮುಷ್ಠಿ ಅಕ್ಕಿಯನ್ನು ದಾನ ಮಾಡುತ್ತಿದೆ. ಸಂಸ್ಥೆ ಆ ಅಕ್ಕಿಯನ್ನು ಸಂಗ್ರಹಿಸಿ ಅನಾಥ ಆಶ್ರಮಗಳಿಗೆ, ವೃದ್ಧಾಶ್ರಮಗಳಿಗೆ, ಕಡು ಬಡ ಕುಡುಂಬಗಳಿಗೆ ನೀಡುತ್ತಿದೆ. ಈ ಮಹತ್ತರ ಕಾಯಕಕ್ಕೆ ಶಾಲೆಯ ಪೋಷಕರೂ ಸಹ ಸಹಕಾರವನ್ನು ನೀಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪ್ರತಿವಾರ ಶಾಲೆಯ ಹತ್ತು ಪೋಷಕರೂ ಸಹ ಅತಿಥಿಗಳಾಗಿ ಭಾಗವಹಿಸುತ್ತಾರೆ.
ಇಲ್ಲಿಯವರೆಗೆ ಆರಕ್ಷಕ ಅಧೀಕ್ಷಕರು, ಸ್ಕೌಟ್ ಮತ್ತು ಗೈಡ್ ಮುಖ್ಯಸ್ಥರು, ಶಿಕ್ಷಣ ತಜ್ಞರು, ಸಂಗೀತ ವಿದ್ವಾಂಸರು, ಸಮಾಜ ಸೇವಕರು, ಸಾಹಿತಿಗಳು, ಕೈಗಾರಿಕಾ ಉದ್ಯಮಿಗಳು, ವೈದ್ಯರು, ಸೈನಿಕರು, ವಕೀಲರು, ಮನೋವೈದ್ಯರು, ಕಲಾವಿದರು ಹೀಗೆ ಅನೇಕರನ್ನು ಆಹ್ವಾನಿಸಿ ಅವರನ್ನು ಗೌರವಿಸಿ ಅವರ
ಸಾಧನೆಗಳನ್ನು ಮಕ್ಕಳಿಗೆ ತಿಳಿಸಿದ್ದಾರೆ. ಈ ಕಾಯಕ ಇತರರಿಗೆ ಸ್ಪೂರ್ತಿಯ ಚಿಲುಮೆಯಾಗಿದೆ ಮತ್ತು ಶಾಲೆಯ ಪೋಷಕರು ಹರ್ಷ ವ್ಯೆಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ