ತ್ರಿಪುರಾದಲ್ಲಿ 25 ವರ್ಷಗಳ ಕಮ್ಯೂನಿಸ್ಟ್ ಪಕ್ಷದ ಆಡಳಿತ ಅಂತ್ಯ

ಅಗರ್ತಲಾ: ತ್ರಿಪುರಾದಲ್ಲಿ ಕಳೆದ 25 ವರ್ಷಗಳಿಂದ ಆಳ್ವಿಕೆ ನಡೆಸುತ್ತಿರುವ ಕಮ್ಯುನಿಸ್ಟ್ ಪಕ್ಷ (ಸಿಪಿಐ(ಎಂ) ಈ ಬಾರಿ ಅಧಿಕಾರ ಕಳೆದುಕೊಂಡಿದ್ದು, ಮಾಣಿಕ್ ಸರ್ಕಾರ್ ಸರ್ಕಾರ ಅಂತ್ಯಕಂಡಿದೆ. ಬಿಜೆಪಿ ಪಾರುಪತ್ಯಸ್ಥಾಪಿಸಿದ್ದು, 41 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿ 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಸಿಪಿಎಂ 20 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಪಕ್ಷ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಒಟ್ಟಾರೆ ದೇಶದ ಪೂರ್ವಭಾಗದಲ್ಲಿಯೂ ಮೋದಿ ಅಲೆ ಎದ್ದಿದೆ.

ದೇಶದಲ್ಲೇ ಅತ್ಯಂತ ಬಡ ಸಿಎಂ ಎಂದು ಪ್ರಖ್ಯಾತರಾಗಿರುವ ಮಾಣಿಕ್‌ ಸರ್ಕಾರ್‌ ಅವರು ಸತತ ಐದನೇ ಬಾರಿಗೆ ತ್ರಿಪುರಾದಲ್ಲಿ ಚುಕ್ಕಾಣಿ ಹಿಡಿಯಲು ಸ್ಪರ್ಧೆಗಿಳಿದಿದ್ದರೂ ಈ ಬಾರಿ ಕಮಲ ಅರಳಿದೆ. 65 ವರ್ಷಗಳ ರಾಜಕೀಯ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಸಿಪಿಐ(ಎಂ) ನಡುವೆ ನೇರ ಹಣಾಹಣಿಗೆ ತ್ರಿಪುರಾ ಸಾಕ್ಷಿಯಾಗಿದೆ. 60 ವಿಧಾನ ಸಭಾ ಕ್ಷೇತ್ರಗಳಿರುವ ತ್ರಿಪುರದಲ್ಲಿ ಫೆ.18 ರಂದು 59 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ