ಇನ್ಫೋಸಿಸ್ ನೌಕರರು, ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ

ಇನ್ಫೋಸಿಸ್ ನೌಕರರು, ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ

ಬೆಂಗಳೂರು, ಮಾ.3-ವಂಚನೆ ಪ್ರಕರಣದ ಸಂಬಂಧ ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್‍ನ ಹಲವಾರು ನೌಕರರು, ಆದಾಯ ತೆರಿಗೆ ಅಧಿಕಾರಿಗಳು ಹಾಗೂ ನಕಲಿ ಲೆಕ್ಕಪರಿಶೋಧಕನೊಬ್ಬನ ವಿರುದ್ಧ ಕೇಂದ್ರೀಯ ತನಿಖಾ ದಳ-ಸಿಬಿಐ ತನಿಖೆ ತೀವ್ರಗೊಳಿಸಿದೆ.
ಇನ್ಫೋಸಿಸ್ ಟೆಕ್ನಾಲಜೀಸ್ ಹಲವು ಉದ್ಯೋಗಿಗಳು, ಐಟಿ ಇಲಾಖೆ ಅಧಿಕಾರಿಗಳು ಹಾಗೂ ಬೆಂಗಳೂರಿನ ನಕಲಿ ಸಿಎ-ಇವರೆಲ್ಲರೂ ಶಾಮೀಲಾಗಿ ಪರಿಷ್ಕøತ ತೆರಿಗೆ ಸಲ್ಲಿಕೆಯಲ್ಲಿ(ರಿವೈಸ್ಡ್ ಟ್ಯಾಕ್ಸ್ ರಿಟನ್ರ್ಸ್) ದೊಡ್ಡ ಮಟ್ಟದ ವಂಚನೆ ಎಸಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ಸಿಬ್ಬಂದಿ ತನಿಖೆ ಚುರುಕುಗೊಳಿಸಿದ್ದಾರೆ.
ವಿವಿಧ ಕಂಪನಿಗಳ ತೆರಿಗೆ ಪಾವತಿದಾರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಹಣ ಮರುಪಾವತಿ ಪಡೆದ ಹಗರಣ ಇದಾಗಿದೆ.
ವಿವಿಧ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಉದ್ಯೋಗಿಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ನಡೆದ ಈ ಹಗರಣವನ್ನು ಕಳೆದ ಜನವರಿಯಲ್ಲಿ ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿತ್ತು. ಈ ಸಂಬಂಧ ಎಫ್‍ಆರ್‍ಐ ಸಹ ದಾಖಲಾಗಿದೆ. ಅಚ್ಚರಿ ಸಂಗತಿ ಎಂದರೆ ಈ ಇಲಾಖೆಯ ಕೆಲವು ಅಧಿಕಾರಿಗಳು, ಇನ್ಫೋಸಿಸ್ ಕಂಪನಿಯ ಸಿಬ್ಬಂದಿ ಮತ್ತು ಬೋಗಸ್ ಲೆಕ್ಕ ಪರಿಶೋಧಕರು (ಸಿಎ) ಜತೆಗೂಡಿ ವಂಚನೆ ಎಸಗಿರುವುದು ಪತ್ತೆಯಾಗಿತ್ತು.
ವಿವಿಧ ಕಂಪೆನಿಗಳ ಹೆಸರಿನಲ್ಲಿ 250 ತೆರಿಗೆ ಪಾವತಿದಾರರ ಹೆಸರಿನಲ್ಲಿ ನಕಲಿ ದಾಖಲೆ ಪತ್ರಗಳನ್ನು ಬಳಸಿ 1,010 ಪರಿಷ್ಕøತ ತೆರಿಗೆ ವಿವರಗಳನ್ನು ಸಲ್ಲಿಸಿದ್ದರು. ಈ ಮೂಲಕ ಮೂರು ತೆರಿಗೆ ವರ್ಷಗಳಿಗೆ ಐಟಿ ರಿಟನ್ರ್ಸ್ ಸಲ್ಲಿಸಿ ಕಾನೂನುಬಾಹಿರವಾಗಿ ಹಣ ಮರುಪಾವತಿಗಾಗಿ ಹಕ್ಕು ಪ್ರತಿಪಾದಿಸಿದ್ದರು.
ಇ-ರಿಟನ್ರ್ಸ್‍ಗಾಗಿ ಐಟಿ ಇಲಾಖೆಗೆ ಇನ್ಫೋಸಿಸ್ ವೆಂಡರ್(ಮಾರಾಟ ಸಂಸ್ಥೆ) ಆಗಿತ್ತು. ನಕಲಿ ಲೆಕ್ಕಪರಿಶೋಧಕ ನಾಗೇಶ್ ಶಾಸ್ತ್ರಿ ಐಟಿ ರಿಟನ್ರ್ಸ್‍ಗಳನ್ನು ಸಲ್ಲಿಸಿದ್ದರು.
ಆರೋಪಿ ನಂ.1 ಆದ ನಾಗೇಶ್ ಶಾಸ್ತ್ರಿ, ಇನ್ಫೋಸಿಸ್ ಸಂಸ್ಥೆ ಮತ್ತು ಐಟಿ ಇಲಾಖೆ ಸಿಬ್ಬಂದಿ ಜೊತೆ ಶಾಮೀಲಾಗಿ ನಕಲಿ ರಿಟನ್ರ್ಸ್‍ಗಳನ್ನು ಸಲ್ಲಿಸಿ ಸುಮಾರು 5 ಕೋಟಿ ರೂ.ಗಳ ಹಣ ಮರುಪಾವತಿಗಾಗಿ ಕ್ಲೇಮು ಸಲ್ಲಿಸಿದ್ದರು.
ಈಗ ಈ ಪ್ರಕರಣದ ತನಿಖೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ