ಒಂಟಿ ಮನೆ ನಿರ್ಮಾಣದ ಬಿಲ್ ಕೇಳಿದ ಮಹಿಳೆಗೆ ಮಂಚಕ್ಕೆ ಆಹ್ವಾನ: ಬಿಬಿಎಂಪಿ ಅಧಿಕಾರಿ

ಒಂಟಿ ಮನೆ ನಿರ್ಮಾಣದ ಬಿಲ್ ಕೇಳಿದ ಮಹಿಳೆಗೆ ಮಂಚಕ್ಕೆ ಆಹ್ವಾನ: ಬಿಬಿಎಂಪಿ ಅಧಿಕಾರಿ ವಿರುದ್ಧ ಗಂಭೀರ ಆರೋಪ

ಬೆಂಗಳೂರು,ಮಾ.1- ಶಾಸಕ ಮುನಿರತ್ನ ಕ್ಷೇತ್ರ ಆರ್.ಆರ್.ನಗರದಲ್ಲಿ ಲಂಚಾವತಾರದ ಜೊತೆಗೆ ಮಂಚಾವತಾರವೂ ಕೇಳಿಬಂದಿದೆ. ಓಎïಸಿ ಕೇಬಲ್ ಅಳವಡಿಕೆಗೆ ಲಂಚ ಕೇಳಿದ ಬಿಬಿಎಂಪಿ ಅýಕಾರಿಗಳು ಒಂಟಿ ಮನೆ ನಿರ್ಮಾಣದ ಬಿಲ್ ಕೇಳಿದ ಮಹಿಳೆಯನ್ನು ಮಂಚಕ್ಕೆ ಆಹ್ವಾನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಲಗ್ಗೆರೆ ವಾರ್ಡ್‍ನಲ್ಲಿ ಒಂಟಿ ಮನೆ ನಿರ್ಮಾಣ ಸಂಬಂಧ ಬಿಲ್ ಕೇಳಲು ಹೋದ ಮಹಿಳೆಯೊಬ್ಬರಿಗೆ ಲಂಚ ಕೇಳಿರುವುದರ ಜೊತೆಗೆ ಅýಕಾರಿಗಳು ಮಂಚಕ್ಕೂ ಕರೆದಿರುವ ಅತ್ಯಂತ ನಾಚಿಕೆಗೇಡಿನ ಹಾಗೂ ತಲೆತಗ್ಗಿಸುವ ಸಂಗತಿ ದಾಖಲೆ ಸಮೇತ ಬಹಿರಂಗವಾಗಿದೆ.

ಒಂಟಿ ಮನೆ ನಿರ್ಮಾಣ ಸಂಬಂಧ ಬಿಲ್ ಕೇಳಲು ಹೋದ ಮಹಿಳೆಯೊಬ್ಬರಿಗೆ ಲಂಚ ಕೇಳಿರುವುದಲ್ಲದೆ ಮಂಚಕ್ಕೂ ಆಹ್ವಾನಿಸಿರುವ ಮಹಾನ್ ವ್ಯಕ್ತಿ ಕೇಸ್‍ವರ್ಕರ್ ಚಂದ್ರು. ಅಲ್ಲದೆ ಈ ವಾರ್ಡ್‍ನಲ್ಲಿ ಓಎïಸಿ ಅಳವಡಿಕೆ ಸಂಬಂಧ ಕಾಪೆರ್Çೀರೇಟರ್ ಹೆಸರಿನಲ್ಲಿ ಎತ್ತುವಳಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದವರು ಸ್ಥಳೀಯ ಕಾಪೆರ್Çೀರೇಟರ್ ಮಂಜುಳಾ ನಾರಾಯಣಸ್ವಾಮಿಯವರು.

ಇವರು ಇಂದು ಪತ್ರಿಕಾಗೋಷ್ಠಿ ನಡೆಸಿ ಕೇಸ್‍ವರ್ಕರ್ ಚಂದ್ರು ಅವರು ಒಂಟಿ ಮನೆ ನಿರ್ಮಾಣ ಸಂಬಂಧ ಮಹಿಳೆಯೊಬ್ಬರಿಂದ ಲಂಚ ಕೇಳಿದ ಬಗ್ಗೆ ಮತ್ತು ಮಂಚಕ್ಕೆ ಕರೆದ ಬಗ್ಗೆ ಆಡಿಯೋ ಸಂಬಂýತ ಸಿಡಿ ಬಿಡುಗಡೆ ಮಾಡಿದರು.

ಆರ್.ಆರ್.ನಗರದಲ್ಲಿ ಅýಕಾರಿಗಳು ಕೊಳ್ಳೆ ಹೊಡೆಯಲು ನಿಂತಿದ್ದಾರೆ. ಕೇಸ್ ವರ್ಕರ್ ಚಂದ್ರು, ಎಇಇ ಬಸವರಾಜ್, ಎಇ ಅಶ್ವಥ್ ಇವರು ಶಾಸಕ ಮುನಿರತ್ನ ಅವರ ಕುಮ್ಮಕ್ಕಿನಿಂದ ಓಎïಸಿ ಕೇಬಲ್ ಅಳವಡಿಸಲು ಲಕ್ಷ ಗಟ್ಟಲೇ ಹಣ ಪೀಕುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕರು ಅýಕಾರಿಗಳ ಮೂಲಕ ಮಹಿಳಾ ಪಾಲಿಕೆ ಸದಸ್ಯರ ಮೇಲೆ ದೌರ್ಜನ್ಯ ವೆಸಗುತ್ತಿದ್ದಾರೆ. ಅýಕಾರಿಗಳು ಆರ್‍ಆರ್‍ನಗರ ಕ್ಷೇತ್ರದಲ್ಲಿ ರಾಜಾರೋಷವಾಗಿ ಲಂಚ ಸ್ವೀಕರಿಸುತ್ತಿದ್ದಾರೆ.

ಕೇಸ್ ವರ್ಕರ್ ಚಂದ್ರು ಎಂಬಾತನಿಂದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳವಾಗಿದೆ. ಈ ಬಗ್ಗೆ ಪೆÇಲೀಸರಿಗೆ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ