ಕಂಚಿ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ವಿಧಿವಶ

 

ಕಂಚೀಪುರಂ: ಅಪಾರ ಭಕ್ತರನ್ನುಳ್ಳ ಕಂಚಿ ಕಾಮಕೋಟಿ ಮಠದ ಶಂಕರಾಚಾರ್ಯ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಬುಧವಾರ ವಿಧಿವಶರಾಗಿದ್ದಾರೆ .

ಕಾಮಕೋಟಿ ಮಠದ ಶಂಕರಾಚಾರ್ಯ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಯವರು  . ಅವರಿಗೆ 82 ವರ್ಷ ವಯಸ್ಸಾಗಿತ್ತು.

1954 ರಿಂದ ಕಂಚಿ ಪೀಠದ 69 ನೇ ಪೀಠಾಧಿಪತಿಯಾಗಿ ಜಯೇಂದ್ರ ಸರಸ್ವತಿಗಳು ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿದ್ದರು.

ವಯೋಸಹಜ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.

ಹಲವು ವಿವಾದಗಳು, ಪ್ರಕರಣಗಳೂ ಶ್ರೀಗಳ ವಿರುದ್ಧ ಕೇಳಿ ಬಂದಿದ್ದವು. ಶ್ರೀಗಳಿಗೆ ತಮಿಳು ನಾಡು ಸೇರಿದಂತೆ ವಿಶ್ವಾದ್ಯಂತ ಅಪಾರ ಭಕ್ತರಿದ್ದಾರೆ.

 

82ವರ್ಷದ ಶ್ರೀಗಳು ಎರಡು ತಿಂಗಳ ಕೆಳಗೆ  ಪಾರ್ಶ್ವವಾಯುಗೆ ತುತ್ತಾಗಿದ್ದರು.  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಹೃದಯಾಘಾತವಾಗಿತ್ತು. ಅದಕ್ಕೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಪರಮಪದ ಸೇರಿದ್ದಾರೆ.
ಮತ್ತೊಂದು  ವರದಿ ಪ್ರಕಾರ  ಆಂಧ್ರಪ್ರದೇಶದ ನೆಲ್ಲೂರು ನಗರದ ದೇವಸ್ಥಾನವೊಂದಕ್ಕೆ ತೆರಳುತ್ತಿದ್ದ ಶ್ರೀಗಳು ವಾಹನ ಏರುವಾಗ ಪ್ರಜ್ಞೆತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಅವರ ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿದಿತ್ತು. ತೀವ್ರ ನಿಶ್ಶಕ್ತಿ ಹಿನ್ನೆಲೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳೀಸಿದೆ.
1954ರಿಂದ ಕಂಚಿ ಪೀಠದ 69ನೆಯ ಪೀಠಾಧಿಪತಿಯಾಗಿ ಜಯೇಂದ್ರ ಸರಸ್ವತಿಗಳು ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿದ್ದರು. ಹಲವು ವಿವಾದಗಳು, ಪ್ರಕರಣಗಳೂ ಶ್ರೀಗಳ ವಿರುದ್ಧ ಕೇಳಿ ಬಂದಿದ್ದವು. 2004ರಲ್ಲಿ ಕಂಚೀಪುರದ ದೇವಸ್ಥಾನ ಉದ್ಯೋಗಿ ಕೊಲೆ ಆರೋಪ ಇವರ ವಿರುದ್ಧ ಕೇಳಿಬಂದಿತ್ತು.
ಒಂಭತ್ತು ವರ್ಷಗಳ ನಂತರ ಈ ಪ್ರಕರಣದಲ್ಲಿ ಶ್ರೀಗಳೂ ಸೇರಿದಂತೆ 22ಮಂದಿ ನಿರ್ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಅಂದಿನ ತಮಿಳುನಾಡು ಸರ್ಕಾರ ಪೊಲೀಸ್ ಮುಖಾಂತರ ಇವರನ್ನು ರಾತ್ರೋರಾತ್ರಿ ಬಂಧಿಸಿದ್ದರು. ಇದು ಆಗ ಅಂತರ‌್ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.
1935ರ ಜುಲೈ 15ರಂದು ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಸುಬ್ರಮಣಿಯಂ. ಆದಿಗುರು ಶ್ರೀ ಶಂಕರಾಚಾರ್ಯರಿಂದ ೮ನೆಯ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ  ಕಂಚಿ ಕಾಮಕೋಟಿ ಪೀಠದ69ನೆಯ ಪೀಠಾಧಿಪತಿಗಳು ಇವರಾಗಿದ್ದರು.
ಮಾರ್ಚ್ 22 1954ರಂದು ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿಗಳು ಇವರಿಗೆ ಪೀಠವನ್ನಿತ್ತು, ಶ್ರೀ ಜಯೇಂದ್ರ ಸರಸ್ತವತಿ ಎಂಬ ಆಶ್ರಮ ನಾಮವನ್ನಿತ್ತರು.
ಶ್ರೀ ಮಠವು ದೇಶದ ಹಲವೆಡೆ ಶಾಲೆ, ಕಣ್ಣಿನ  ಆಸ್ಪತ್ರೆಗಳನ್ನು ಸ್ಥಾಪಿಸಿ, ಯಶಸ್ವಿಯಾಗಿ ನಿರ್ವಹಿಸುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ