ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳಿಗೂ ಸುಪ್ರೀಂ ತಡೆ ನೀಡಿರುವುದು ಸಂತಸ ತಂದಿದೆ: ನಟಿ ಪ್ರಿಯಾ ಪ್ರಕಾಶ್ ವಾರಿಯರ್

ನವದೆಹಲಿ:ಫೆ-22: ಒರು ಅಡಾರ್ ಲವ್ ಚಿತ್ರದ ಕಣ್ಸನ್ನೆ ಮೂಲಕ ಖ್ಯಾತಿ ಹಾಗೂ ವಿವಾದಕ್ಕೀಡಾಗಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಒರು ಅದಾರ್ ಲವ್’ ಚಿತ್ರದ ಹಾಡೊಂದರಲ್ಲಿ ಮುಸ್ಲಿಂ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಆರೋಪಿಸಿ ಕೆಲವು ಮುಸ್ಲಿಂ ಸಮುದಾಯದ ಕೆಲ ಸದಸ್ಯರು ಚಿತ್ರತಂಡ ಹಾಗೂ ನಟಿಯ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದರು. ಅಲ್ಲದೇ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಹಲವೆಡೆ ದೂರು ದಾಖಲಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ನಟಿ ಹಾಗೂ ನಿರ್ದೇಶಕ ಒಮರ್ ತಮ್ಮ ವಿರುದ್ಧದ ಪ್ರಕರಣಗಳನ್ನು ರದ್ದು ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ತಡೆ ನೀಡಿತ್ತು. ಅಲ್ಲದೆ ಭವಿಷ್ಯದಲ್ಲೂ ಚಿತ್ರದ ನಾಯಕಿ ವಿರುದ್ಧ ಯಾವುದೇ ರೀತಿಯ ಎಫ್ ಐಆರ್ ದಾಖಲಿಸಬಾರದು ಎಂದು ಆದೇಶ ನೀಡಿತ್ತು.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ನಟಿ ಪ್ರಿಯಾ, ಈಗಷ್ಟೇ ವೃತ್ತಿ ಜೀವನ ಆರಂಭಿಸಿರುವ ನಾನು ಕೆಲವೊಂದು ಬೆದರಿಕೆಗಳಿಂದ ಉದ್ವಿಗ್ನತೆ ಹೊಂದಿದ್ದೇನೆ. ಮುಸ್ಲಿಂ ಭಾವನೆಗಳನ್ನ ನೋಯಿಸುವ ಇರಾದೆ ನನಗಿಲ್ಲ. ಸುಪ್ರೀಂಕೋರ್ಟ್ ಆದೇಶದ ಕುರಿತು ನಾನು ಸಂತೋಷಗೊಂಡಿರುವೆ. ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.

Priya Prakash Varrier,SC stayed all criminal proceedings,reacts,am happy with the order of Supreme Court

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ