ನನ್ನ ಬಂಗಲೆಗೆ ದೆವ್ವಗಳನ್ನು ಬಿಟ್ಟಿದ್ದಾರೆ – ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್

ಪಾಟ್ನಾ, ಫೆ.22-ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ನನ್ನ ಬಂಗಲೆಗೆ ದೆವ್ವಗಳನ್ನು ಬಿಟ್ಟಿದ್ದಾರೆ…. ಆ ಭೂತಗಳ ಕಾಟದಿಂದಾಗಿ ನಾನು ಬಂಗಲೆಯನ್ನು ಖಾಲಿ ಮಾಡಬೇಕಾಯಿತು…!?

ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್‍ರ ಪುತ್ರ ತೇಜ್ ಪ್ರತಾಪ್ ಯಾದವ್ ನೀಡಿರುವ ಹಾಸ್ಯಾಸ್ಪದ ಗಂಭೀರ ಹೇಳಿಕೆ.

ನಿತಿಶ್ ಕುಮಾರ್ ನೇತೃತ್ವದ ಮೈತ್ರಿಕೂಟ ಸರ್ಕಾರದಲ್ಲಿ ತೇಜ್ ಪ್ರತಾಪ್ ಆರೋಗ್ಯ ಸಚಿವರಾಗಿದ್ದಾಗ ಅವರಿಗೆ ಪಾಟ್ನಾದಲ್ಲಿ ದೇಶ್‍ರತ್ನ ಮಾರ್ಗದಲ್ಲಿನ ಬಂಗಲೆಯನ್ನು ಸಚಿವರ ಅಧಿಕೃತ ನಿವಾಸವಾಗಿ ನೀಡಲಾಗಿತ್ತು. ಆದರೆ ಆರು ತಿಂಗಳ ಮಹಾಮೈತ್ರಿ ಮುರಿದು ಬಿದ್ಧ ನಂತರ ಅವರು ಮಂತ್ರಿ ಸ್ಥಾನ ಕಳೆದುಕೊಂಡಿದ್ದರು. ಅದಾಗ್ಯೂ ಅವರು ಆ ಬಂಗಲೆಯಲ್ಲಿ ಮುಂದುವರಿದಿದ್ದರು.

ತೇಜ್ ಪ್ರತಾಪ್ ಹೇಳುವಂತೆ ಮುಖ್ಯಮಂತ್ರಿ ನಿತಿಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನನ್ನನ್ನು ಕಾಡಲು ಈ ಬಂಗಲೆಗೆ ದೆವ್ವಗಳನ್ನು ಬಿಟ್ಟಿದ್ದಾರೆ. ಭೂತಗಳು ನನ್ನನ್ನು ಬೆನ್ನಟ್ಟಿ ಕಾಟ ನೀಡಲು ಆರಂಭಿಸಿದ್ದರಿಂದ ನಾನು ಕಳೆದ ವಾರ ಅಲ್ಲಿಂದ ತೆರವುಗೊಂಡೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅತಿಯಾದ ಧಾರ್ಮಿಕ ನಂಬಿಕೆಗಳು ಮತ್ತು ಕಂದಾಚಾರ- ಮೂಢನಂಬಿಕೆಗಳನ್ನು ಹೊಂದಿರುವ ಇವರು ಮಂತ್ರವಾದಿಯ ಸಲಹೆ ಮೇರೆಗೆ ದುಷ್ಮನ್ ಮಾರನ್ ಜಪ್ (ದುಷ್ಟ ನಿಗ್ರಹ ಜಪ) ಹೋಮವನ್ನು ಇತ್ತೀಚೆಗೆ ಮಾಡಿದ್ದರು.

ತೇಜ್ ಪ್ರತಾಪ್ ಯಾದವ್‍ರ ಈ ಹೇಳಿಕೆಗೆ ವಿವಿಧ ವಲಯಗಳಿಂದ ತೀವ್ರ ಲೇವಡಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ