ಹಾಸನ: ಕಾವೇರಿ ಅಂತಿಮ ತೀರ್ಪು ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅತೃಪ್ತಿ ವ್ಯಕ್ತಪಡಿಸಿದ್ದು, ನ್ಯಾಯಯುತವಾಗಿ ನಮಗೆ ೪೦ ಟಿಎಂಸಿ ನೀರು ಸಿಗಬೇಕಿತ್ತು ಎಂದು ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ನಾವು ಮೋಸ ಮಾಡಿಲ್ಲ, ಆದರೂ ಅವರೇನಾದರೂ ತಕರಾರು ಮಾಡಿದರೆ ನಮ್ಮಲ್ಲಿಯೂ ಅಸ್ತ್ರಗಳಿವೆ ಎಂದು ಎಚ್ಚರಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸಿಹಿ ಹಂಚಿದ್ದು ಯಾವ ಪುರುಷಾರ್ಥಕ್ಕೆ, ಈ ವಿಷಯದಲ್ಲಿ ಏನು ಸಾಧನೆ ಮಾಡಿದ್ದಾರೆ? ೧೦ ಟಿಎಂಸಿ ನೀರಿಗೆ ತೃಪ್ತಿಪಟ್ಟರೆ ತಲೆಯಲ್ಲಿ ವಿವೇಚನೆ ಇಲ್ಲ ಎಂದರ್ಥ ಎಂದು ಬೇಸರವ್ಯಕ್ತಪಡಿಸಿದರು. ನಮ್ಮ ಜನರಿಗೆ ಆಗುವ ಅನ್ಯಾಯದ ವಿರುದ್ಧ ಮುಂದೆಯೂ ಹೋರಾಟ ಮಾಡೋ ಸನ್ನಿವೇಶ ಬರಲಿದೆ, ೧೦ ಟಿಎಂಸಿ ನೀರನ್ನು ಎಲ್ಲೆಲ್ಲಿಗೆ ಹಂಚಿಕೆ ಮಾಡುತ್ತೀರಿ? ನಮಗೆ ಹಾಲಿ ೪೫ ಟಿಎಂಸಿ ನೀರು ಬೇಕು, ಈ ತೀರ್ಪು ನನಗೆ ತೃಪ್ತಿ ತಂದಿಲ್ಲ ಎಂದು ಹೇಳಿದರು.
ಇದೇ ವೇಳೆ ವಿಧಾನಸಭೆ ಚುನಾವಣೆ ಮೇ ನಲ್ಲಿ ನಡೆಯಲಿದೆ, ಏಪ್ರಿಲ್ ನಲ್ಲಿ ದಿನಾಂಕ ಘೋಷಣೆ ಯಾಗಬಹುದು ಎಂದು ಗೌಡರು ತಿಳಿಸಿದ್ದಾರೆ.
h d deve gowda,hasana,cauvery water dispute, supreme court