ಪ್ರಧಾನಿ ಮೋದಿ ಪಾಕಿಸ್ತಾನ ವಾಯುಮಾರ್ಗವನ್ನು ಬಳಸಿದ್ದಕ್ಕಾಗಿ 2.86 ಲಕ್ಷ ರೂ. ಶುಲ್ಕ

ನವದೆಹಲಿ/ಇಸ್ಲಾಮಾಬಾದ್,ಫೆ.19-ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ, ಆಫ್ಘಾನಿಸ್ತಾನ್, ಇರಾನ್ ಮತ್ತು ಕತಾರ್ ದೇಶಗಳಿಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪಾಕಿಸ್ತಾನ ವಾಯುಮಾರ್ಗವನ್ನು ಬಳಸಿದ್ದಕ್ಕಾಗಿ ಆ ದೇಶವು 2.86 ಲಕ್ಷ ರೂ. ಶುಲ್ಕ ವಿಧಿಸಿದೆ.

ನಿವೃತ್ತ ಸೇನಾಧಿಕಾರಿ ಲೋಕೇಶ್ ಬಾತ್ರ ಅವರು ಪ್ರಧಾನಿ ನರೇಂದ್ರ ಮೋದಿಯವರ ವಾಯು ವಿಮಾನಯಾನ ಕುರಿತು ಕೋರಿದ್ದ ಆರ್‍ಟಿಐ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಡಿಸೆಂಬರ್ 25, 2015ರಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಆಹ್ವಾನದ ಮೇರೆಗೆ ಮೋದಿ ರಾವಲ್ಪಿಂಡಿಗೆ ತೆರಳಿದ್ದರು. ಭಾರತದ ಪ್ರಧಾನಿಗೆ ಅಲ್ಲಿ ಕೆಂಪು ಹಾಸಿನ ಭವ್ಯ ಸ್ವಾಗತ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ಅವರು ನವಾಜ್‍ರನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದರು. ಈ ಕಡುವೈರಿ ರಾಷ್ಟ್ರಗಳ ನಾಯಕರ ಭೇಟಿ ವಿಶ್ವಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.

ಆದರೆ ಪಾಕಿಸ್ತಾನ ವಿಮಾನಯಾನ ಸಂಸ್ಥೆಯು ಮೋದಿ ಭೇಟಿ ವೇಳೆ ತನ್ನ ವಾಯುಮಾರ್ಗ ಬಳಸಲಾಗಿದೆ ಎಂದು 2.86 ಲಕ್ಷ ರೂ. ಶುಲ್ಕ ವಿಧಿಸಿದೆ.

ಮೋದಿಯವರು ಜೂನ್ 2016ರಲ್ಲಿ ನೇಪಾಳ, ಭೂತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇರಾನ್, ಆಸ್ಟ್ರೇಲಿಯ, ಫಿಜಿ, ಕತಾರ್ ಸೇರಿದಂತೆ 11 ದೇಶಗಳಿಗೆ ಪ್ರಯಾಣ ಕೈಗೊಂಡಿದ್ದಾರೆ ಎಂದು ಲೋಕೇಶ್ ಬಾತ್ರ ಅವರಿಗೆ ನೀಡಲಾದ ಆರ್‍ಟಿಐ ಮಾಹಿತಿಯಲ್ಲಿ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ