ಕಡಪ ಜಿಲ್ಲೆಯ ಕೆರೆಯೊಂದರಲ್ಲಿ ಐವರ ಮೃತದೇಹಗಳು. ಇವರು ಯಾರು ? ಎಲ್ಲಿಯವರು ?

ಹೈದರಾಬಾದ್, ಫೆ.19-ಆಂಧ್ರಪ್ರದೇಶದ ಕಡಪ ಜಿಲ್ಲೆಯ ಒಂಟಿಮಿಟ್ಟಾದ ಪುಟ್ಟ ಕೆರೆಯೊಂದರಲ್ಲಿ ಐವರ ಮೃತದೇಹಗಳು ಪತ್ತೆಯಾಗಿವೆ. ಆದರೆ ಇವರು ಯಾರು ? ಎಲ್ಲಿಯವರು ? ಇಲ್ಲಿಗೇಕೆ ಬಂದರು ? ಸಾವಿಗೆ ಕಾರಣವೇನು ? ಎಂಬಿತ್ಯಾದಿ ಪ್ರಶ್ನೆಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಆದರೆ ಇನ್ನೊಂದು ಮೂಲಗಳ ಪ್ರಕಾರ ರಕ್ತಚಂದನ ಕಳ್ಳಸಾಗಣೆದಾರರಿಂದ ಐವರ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಶವಗಳ ಮೇಲೆ ಗಾಯಗಳ ಗುರುತಿದೆ. ಮರಣೋತ್ತರ ಪರೀಕ್ಷೆಗಳ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ಜಿಲ್ಲಾ ಪೆÇಲೀಸ್ ವರಿóಷ್ಠಾಧಿಕಾರಿ ನಾಗಿ ರೆಡ್ಡಿ ತಿಳಿಸಿದ್ದಾರೆ.

ಇನ್ನೊಂದು ಮೂಲಗಳ ಪ್ರಕಾರ ಇವರು ಕೂಲಿ ಕಾರ್ಮಿಕರಾಗಿದ್ದು, ರಕ್ತ ಚಂದನ ಕಳ್ಳಸಾಗಣೆದಾರರು ಇವರನ್ನು ತಮ್ಮ ಕೃತ್ಯಕ್ಕೆ ಬಳಸಿಕೊಂಡು ನಂತರ ಕೊಲೆ ಮಾಡಿರಬಹುದು ಎಂಬ ಸಂಶಯವಿದೆ.
ಈ ಪ್ರಕರಣದ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ಮುಂದುವರಿಸುವುದಾಗಿ ರಕ್ತಚಂದನ ಕಳ್ಳಸಾಗಣೆ ನಿಗ್ರಹ ಕಾರ್ಯಪಡೆ ಮುಖ್ಯಸ್ಥ ಎಂ.ಕಾಂತಾರಾವ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ