ಅರಣ್ಯ ಪ್ರದೇಶದಿಂದ ಹಾಡು ಹಗಲೇ ಗ್ರಾಮಕ್ಕೆ ನುಗ್ಗಿದ ಚಿರತೆಯು ಗ್ರಾಮದ ಇಬ್ಬರು ಯುವಕರ ಮೇಲೆ ದಾಳಿ

ಕೆಆರ್ ಪೇಟೆ, ಫೆ.18- ತಾಲೂಕಿನ ಆದಿಹಳ್ಳಿ ಬಳಿ ಇರುವ ತಿಮ್ಮಪ್ಪ ಗುಡ್ಡದ ಅರಣ್ಯ ಪ್ರದೇಶದಿಂದ ಹಾಡು ಹಗಲೇ ಗ್ರಾಮಕ್ಕೆ ನುಗ್ಗಿದ ಚಿರತೆಯು ಗ್ರಾಮದ ಇಬ್ಬರು ಯುವಕರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಿನ್ನೆ ನಡೆದಿದೆ.

ಆದಿಹಳ್ಳಿ ಗ್ರಾಮದ ರವಿಕುಮಾರ್(30) ಮತ್ತು ಕಾಂತರಾಜ್(32) ಗಾಯಗೊಂಡ ಯುವಕರು ಚಿಕಿತ್ಸೆ ಪಡಿಯುತ್ತಿದ್ದಾರೆ.

ಈ ಯುವಕರು ಜಮೀನಿಗೆ ಹೋಗಿ ವಾಪಸ್ ಬರುತ್ತಿದ್ದಾಗ ಗ್ರಾಮದ ಬಳಿ ಇರುವ ಹಳ್ಳದಿಂದ ಹಾರಿಬಂದ ಚಿರತೆಯು ಇಬ್ಬರ ಮೇಲೂ ದಾಳಿ ಮಾಡಿ ಗಾಯಗೊಳಿಸಿ ಪರಾರಿಯಾಗಿದೆ.

ಚಿರತೆ ದಾಳಿಯಿಂದ ಭಯ ಭೀತರಾದ ಯುವಕರು ಕಿರುಚಿಕೊಂಡಿದ್ದರಿಂದ ಗ್ರಾಮಸ್ಥರು ಗುಂಪಾಗಿ ಬಂದು ಚಿರತೆ ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ವಿಷಯ ತಿಳಿಯುದ್ದಂತೆಯೇ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ, ಅರಣ್ಯ ರಕ್ಷಕರಾದ ಶಿವಮೂರ್ತಿ, ನಾರಾಯಣಗೌಡ, ಶಂಕರೇಗೌಡ ಅವರು ತಂಡವು ಗಾಯಗೊಂಡಿದ್ದ ರವಿಕುಮಾರ್ ಮತ್ತು ಕಾಂತರಾಜ್ ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಗ್ರಾಮಸ್ಥರ ಆಗ್ರಹ: ಇಷ್ಟು ದಿನ ಸಾಕು ಪ್ರಾಣಿಗಳಾದ ಕುರಿ, ಮೇಕೆ, ನಾಯಿಗಳನ್ನು ತಿಂದು ಹಾಕುತ್ತಿದ್ದ ಚಿರತೆಗಳು ಹಾಡಹಗಲೇ ಗ್ರಾಮಕ್ಕೆ ನುಗ್ಗಿ ಮನುಷ್ಯರ ಮೇಲೆ ದಾಳಿ ಮಾಡಿರುವುದು ಆತಂಕದ ವಿಚಾರವಾಗಿದೆ. ಹಾಗಾಗಿ ಕೂಡಲೇ ಅರಣ್ಯಾಧಿಕಾರಿಗಳು ತಕ್ಷಣ ಕಾರ್ಯಾಚರಣೆ ಆರಂಭಿಸಿ ಚಿರತೆಯನ್ನು ಹಿಡಿಯಬೇಕು ಈ ಮೂಲಕ ಗ್ರಾಮಸ್ಥರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ