ಭಾರತದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿಐ ಬಹಿರಂಗ

ನವದೆಹಲಿ:ಫೆ-17: ಭಾರತದಲ್ಲಿ ಸುಮಾರು 60 ಸಾವಿರ ಕೋಟಿ ರೂ. ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿವೆ. ಆರ್ ಟಿಐ ಅರ್ಜಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ದತ್ತಾಂಶಗಳಿಂದ ಈ ಮಾಹಿತಿ ಬಹಿರಂಗವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿ ಹಕ್ಕು ಕಾಯ್ದೆ ಮಾಹಿತಿಯನ್ವಯ ಸರ್ಕಾರಿ ಆಡಳಿತ ಇರುವ ಬ್ಯಾಂಕ್ ಗಳಲ್ಲೇ ಸುಮಾರು 8, 670 ಕೋಟಿ ರೂ ವಂಚನೆಗಳಾಗಿದೆ ಎಂದು ತಿಳಿದುಬಂದಿದೆ. ಆರ್ ಟಿಐ ಅರ್ಜಿ ಮೂಲಕ ಭಾರತದ ಪ್ರಮುಖ 21 ಬ್ಯಾಂಕ್ ಗಳ ಪೈಕಿ 20 ಬ್ಯಾಂಕ್ ಗಳಲ್ಲಿನ ವಂಚನೆ ಪ್ರಕರಣದ ಮಾಹಿತಿ ಲಭ್ಯವಾಗಿದೆ.

ಪ್ರಮುಖವಾಗಿ ಕಳೆದ ಒಂದೇ ವರ್ಷದಲ್ಲಿ ಅತೀ ಹೆಚ್ಚು 149 ಬಿಲಿಯನ್ ಡಾಲರ್ ಮೊತ್ತದ ಬ್ಯಾಂಕ್ ವಚನೆ ನಡೆದಿದೆ. 2012-13ನೇ ಸಾಲಿನಲ್ಲಿ 63.57 ಬಿಲಿಯನ್ ಡಾಲರ್ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿದೆ. ಪ್ರಸ್ತುತ ವಂಚನೆ ಪ್ರಕರಣದ ಕೇಂದ್ರ ಬಿಂದುವಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಂದರಲ್ಲೇ 65.62 ಬಿಲಿಯನ್ ಡಾಲರ್ ಮೊತ್ತದ ಸುಮಾರು 389 ವಂಚನೆ ಪ್ರಕರಣಗಳು ದಾಖಲಾಗಿದ್ದು, ಇದು ಮೊದಲಸ್ಥಾನದಲ್ಲಿದೆ.

ಎರಡನೇ ಸ್ಥಾನದಲ್ಲಿ ಬ್ಯಾಂಕ್ ಆಫ್ ಬರೋಡಾ ಇದ್ದು, 44.73 ಬಿಲಿಯನ್ ಡಾಲರ್ ಮೊತ್ತದ 389 ಪ್ರಕರಣಗಳು ದಾಖಲಾಗಿವೆ. ಇನ್ನು ಪಟ್ಟಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ಮೂರನೇ ಸ್ಥಾನದಲ್ಲಿದ್ದು, 40.5 ಬಿಲಿಯನ್ ಡಾಲರ್ ಮೊತ್ತದ 231 ಪ್ರಕರಣಗಳು ದಾಖಲಾಗಿವೆ.

ಅಲ್ಲದೇ ದೇಶದ ಅತೀ ದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಪಡೆದಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಕೂಡ ವಂಚನೆ ಪ್ರಕರಣದಿಂದ ಹೊರತಾಗಿಲ್ಲ. ಎಸ್ ಬಿಐನಲ್ಲೂ 1,069 ವಂಚನೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳ ಒಟ್ಟು ಮೌಲ್ಯ ಮಾತ್ರ ಇನ್ನು ಬಹಿರಂಗವಾಗಿಲ್ಲ. RBI

RBI Data Shows, India’s Bank Fraud Problems,High As Rs 60,000 Crore

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ