ಇಂಟರ್‍ನೆಟ್ ಸೆನ್ಸೆಷನ್ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣಿನ ಕುಡಿನೋಟಕ್ಕೆ ದೇಶವೇ ಫಿದಾ ಆಗಿದೆ. ಇನ್ನೊಂದೆಡೆ ವಿವಾದಗಳೂ ಹೊಗೆಯಾಡುತ್ತಿವೆ

ನವದೆಹಲಿ, ಫೆ.14-ಪ್ರೇಮಿಗಳ ದಿನದ ಸಂದರ್ಭದಲ್ಲೇ ಇಂಟರ್‍ನೆಟ್ ಸೆನ್ಸೆಷನ್ ಆಗಿರುವ ಮಲೆಯಾಳಂ ಉದಯೋನ್ಮುಖ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣಿನ ಕುಡಿನೋಟಕ್ಕೆ ದೇಶವೇ ಫಿದಾ ಆಗಿದೆ. ಇನ್ನೊಂದೆಡೆ ವಿವಾದಗಳೂ ಹೊಗೆಯಾಡುತ್ತಿವೆ.

ವ್ಯಾಲೆಂಟಿನ್ಸ್ ದಿನವಾದ ಇಂದು ಪ್ರೇಮಿಗಳಲ್ಲಿ ಪ್ರಿಯಾ ಕಣ್ಣಿನ ಬಾಣದ್ದೇ ಮಾತು. 18 ವರ್ಷದ ಈ ತರುಣಿ ರಾತ್ರಿ ಬೆಳಗಾಗುವುದರೊಳಗೆ ದೊಡ್ಡ ಸೆಲೆಬ್ರಿಟಿಯಾಗಿಬಿಟ್ಟಿದ್ದಾಳೆ. ಪ್ರಿಯಾ ಅಭಿನಯದ ಒರು ಅಡಾರ್ ಲವ್ ಎಂಬ ಮಲಯಾಳಂ ಚಿತ್ರದ ಮಾಣಿಕ್ಯ ಮಲರಾಯ ಪೂವಿ.. ಹಾಡು ಯೂಟ್ಯೂಬ್‍ನಲ್ಲಿ ಸೂಪರ್‍ಹಿಟ್ ಆಗಿದ್ದು, ಯೂಟ್ಯೂಬ್‍ನಲ್ಲಿ 1 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಎಲ್ಲ ದಾಖಲೆಗಳು ನುಚ್ಚುನೂರಾಗಿವೆ. ಇನ್‍ಸ್ಟಾಗ್ರಾಂನಲ್ಲಿ 25 ಲಕ್ಷ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಟ್ವೀಟರ್‍ನಲ್ಲಿ ಕೇವಲ ಎರಡನೇ ದಿನಗಳಲ್ಲಿ ಪ್ರಿಯಾಳಿಗೆ 80ಕ್ಕೂ ಹೆಚ್ಚು ಫಾಲೋವರ್‍ಗಳು ಸೃಷ್ಟಿಯಾಗಿದ್ದಾರೆ. ಇಂಟರ್‍ನೆಟ್‍ನಲ್ಲಿ ಸದಾ ತಡಕಾಡಲ್ಪಡುತ್ತಿದ್ದ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮ, ಕತ್ರಿನಾ ಕೈಫ್ ಮೊದಲಾದ ಖ್ಯಾತನಾಮರನ್ನೇ ಪ್ರಿಯಾ ಹಿಂದಿಕ್ಕಿದ್ದಾಳೆ.
ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಮಹಾ ರಸಿಕ ಡೊನಾಲ್ಡ್ ಟ್ರಂಪ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ಖ್ಯಾತನಾಮರು ಮತ್ತು ಪ್ರಸಿದ್ಧ ತಾರೆಯರ ಕಣ್ಣುಗಳನ್ನು ನೇತ್ರ ಸುಂದರಿ ಪ್ರಿಯಾಗೆ ಹೋಲಿಸಿರುವ ದೃಶ್ಯಗಳೂ ವೈರಲ್ ಆಗಿದೆ.

ಸುದ್ದಿಯಾಗದ ರೋಶನ್ ಅಬ್ದುಲ್ :
ಈ ಹಾಡಿನಲ್ಲಿ ಪ್ರಿಯಾ ನಗು ಮತ್ತು ಕಣ್‍ಮಿಟುಕಿಗೆ ಕ್ಲೀನ್ ಬೋಡ್ ಆಗಿದ್ದ ಯುವಕ ಹೆಚ್ಚು ಸುದ್ದಿಯಾಗಲೇ ಇಲ್ಲ. ಯಾರು ಈತ..? ಈ ಸುಂದರನ ಹೆಸರು ರೋಷನ್ ಅಬ್ದುಲ್ ರಹೂಫ್. ಪ್ರಿಯಾಳಂತೆಯೇ ಈ ದೃಶ್ಯದಲ್ಲಿ ಈತನ ಅಭಿನಯವೂ ಚೆನ್ನ. ಆದರೆ ಪ್ರಿಯಾದ ಬಿಲ್ಲಿನಂಥ ಹುಬ್ಬಿನ ಸನ್ನೆ ಮತ್ತು ಕಣ್ಣೋಟದ ಬಾಣದ ಮುಂದೆ ರೋಷನ್ ನಗಣ್ಯನಾಗಿದ್ದಾನೆ.

ಹೊಗೆಯಾಡುತ್ತಿರುವ ವಿವಾದ : ಈ ಹಾಡು ಮತ್ತು ಪ್ರಿಯಾ ಜನಪ್ರಿಯತೆ ಉತ್ತುಂಗದಲ್ಲಿರುವಾಗಲೇ ವಿವಾದಗಳೂ ಉದ್ಭವಿಸುತಿವೆ. ಈ ಹಾಡಿನ ಸಾಹಿತ್ಯದಲ್ಲಿ ಪ್ರವಾದಿ ಮಹಮದ್ ಮತ್ತು ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವಂಥ ಸಾಲುಗಳಿವೆ ಎಂದು ಮುಖೀತ್ ಖಾನ್ ಎಂಬುವರು ಹೈದರಾಬಾದ್‍ನ ಫಲಕ್‍ನಾಮ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇನ್ನೊಂದೆಡೆ ಸಂಪ್ರದಾಯವಾದಿಗಳು ಮತ್ತು ಮಹಿಳೆಯರು ಪ್ರೌಢಶಾಲೆಯಲ್ಲೇ ಪ್ರೀತಿ-ಪ್ರೇಮ ಕುರಿತ ತಪ್ಪು ಸಂದೇಶಗಳು ಈ ಹಾಡಿನಲ್ಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ