ಜಮ್ಮು-ಕಾಶ್ಮೀರದ ಕರಣ್ ನಗರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆಗೈದ ಸೇನೆ

ಜಮ್ಮು-ಕಾಶ್ಮೀರದ ಕರಣ್ ನಗರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆಗೈದ ಸೇನೆ
ಶ್ರೀನಗರ:ಫೆ-13: ಕಾಶ್ಮೀರದ ಕರಣ್ ನಗರ ಜನವಸತಿ ಪ್ರದೇಶದಲ್ಲಿ ಅವಿತಿದ್ದ ಉಗ್ರರರ ವಿರುದ್ಧದ ಕಾರ್ಯಾಚರಣೆ ಅಂತ್ಯಗೊಂಡಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಐಜಿಪಿ ಎಸ್ ಪಾಣಿ ತಿಳಿಸಿದ್ದಾರೆ.

ಕರಣ್‌ ನಗರದಲ್ಲಿನ ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ಲಷ್ಕರ ಎ ತೊಯ್ಬ ಉಗ್ರರು ದಾಳಿಗೆ ಯತ್ನಿಸಿದ್ದರು. ಸೇನಾ ಶಿಬಿರದೊಳಗೆ ನುಸುಳಲು ಉಗ್ರರು ಪ್ರಯತ್ನಿಸಿದ್ದು, ಉಗ್ರರ ಪ್ರಯತ್ನವನ್ನು ಸೇನಾಪಡೆಗಳು ವಿಫಲಗೊಳಿಸಿವೆ. ಈ ವೇಳೆ ತಪ್ಪಿಸಿಕೊಳ್ಳುವ ಸಲುವಾಗಿ ಉಗ್ರರು ಕರಣ್ ನಗರದ ಜನವಸತಿ ಪ್ರದೇಶದಲ್ಲಿನ ಮನೆಯೊಳಗೆ ನುಸುಳಿದ್ದು, ಅವಿತಿರುವ ಉಗ್ರರಿಗಾಗಿ ಕಳೆದ 24 ಗಂಟೆಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ಇಬ್ಬರು ಎಇಟಿ ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಹೇಳಿದ್ದಾರೆ.

ನಿನ್ನೆ ರಾತ್ರಿಯಿಂದ ನಡೆದ ಕಾರ್ಯಾಚಾರಣೆಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮನಾಗಿದ್ದು, ಮತ್ತೋರ್ವ ಪೊಲೀಸ್ ಗಾಯಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ