ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು ಒಂದು ವರ್ಷದ ಹುಲಿ ಮರಿ ಶವ ಪತ್ತೆಯಾಗಿದೆ

ಹುಣಸೂರು.ಫೆ.12-ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು ಒಂದು ವರ್ಷದ ಹುಲಿ ಮರಿ ಶವ ಪತ್ತೆಯಾಗಿದೆ..
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ. ಬಿ.ಕುಪ್ಪೆ ವಲಯದ ಕುದುರೆ ಹಳ್ಳ ಅರಣ್ಯ ಪ್ರದೇಶದ ಆನೆಮಾಳ ಬೀಟ್ ಮಚ್ಚೂರು ಬಳಿ ಹುಲಿಮರಿ ಶವ ಪತ್ತೆಯಾಗಿದ್ದು,ಗಸ್ತಿನಲ್ಲಿದ್ದ ಸಿಬ್ಬಂದಿಗಳಿಗೆ ಹುಲಿ ಮರಿಶವ ಗೋಚರಿಸಿತ್ತು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರ ಮೇರೆಗೆ ಸ್ಥಳಕ್ಕೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್, ಎ.ಸಿ.ಎಫ್.ಪೂವಯ್ಯ ನಿನ್ನೆ ಭೇಟಿ ನೀಡಿ ಪರಿಶೀಲಿಸಿದರು.
ನಾಗರಹೊಳೆ ಪಶುವೈದ್ಯ ಡಾ.ಮುಜೀಬ್ ಅಹಮದ್ ಹುಲಿ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಎನ್.ಜಿ.ಓ.ರಾಜಕುಮಾರ್,ವಾರ್ಡನ್ ಕೃತಿಕ, ಗ್ರಾಮತಾನ ಫೌಂಡೇಶನ್ನ ಜವರೇಗೌಡ ಹಾಜರಿದ್ದರು.
ತಿಂಗಳಿನಿಂದೀಚೆಗೆ ವಿವಿಧ ಕಾರಣಗಳಿಂದ ಉದ್ಯಾನವನದೊಳಗೆ ಮೂರು ಹುಲಿ,ಒಂದು ಆನೆ ಸತ್ತಂತಾಗಿದೆ

ಫೋಟೋ ಕ್ರೆಡಿಟ್: theindianexpress.com(ಪ್ರಾತಿನಿಧ್ಯಕ್ಕಾಗಿ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ