ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೈನಿಕರ ಕುರಿತಂತೆ ನೀಡಿರುವ ಹೇಳಿಕೆ ಇದೀಗ ಭಾರೀ ವಿವಾದವವನ್ನೇ ಸೃಷ್ಟಿಸಿದೆ

ನವದೆಹಲಿ,ಫೆ.12- ದೇಶದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ ಸೈನಿಕರು ಎದುರಾಳಿಗಳ ವಿರುದ್ಧ ಹೋರಾಡಲು ಆರು ತಿಂಗಳು ಬೇಕು. ಆದರೆ ಆರ್ಎಸ್ಎಸ್ ಮೂರೇ ದಿನದಲ್ಲಿ ಸಜ್ಜಾಗುತ್ತದೆ ಎಂದು ಭಾಗವತ್ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾಗವತ್ ಅವರ ಈ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಆರ್ಎಸ್ಎಸ್ನ ಅಂಗಸಂಸ್ಥೆ ಇದನ್ನು ಸಮರ್ಥಿಸಿಕೊಂಡಿದ್ದು , ಸೈನಿಕರಿಗಾಗಲಿ ಅಥವಾ ದೇಶಕ್ಕಾಗಿ ಅಪಮಾನ ಮಾಡುವಂತಹ ಹೇಳಿಕೆಯನ್ನು ಸಂಘ ನಾಯಕರು ಮಾಡಿಲ್ಲ ಎಂದು ಆರ್ಎಸ್ಎಸ್ ಬೆಂಬಲಕ್ಕೆ ನಿಂತಿದೆ.

ಭಾಗವಾತ್ ಹೇಳಿದ್ದೇನು:
ನಿನ್ನೆ ಬಿಹಾರದ ಮುಜಾಪ್ಪರ್ನಲ್ಲಿ ಮೋಹನ್ ಭಾಗವತ್ ಆರ್ಎಸ್ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ನಮ್ಮ ದೇಶದಲ್ಲಿ ಯುದ್ದ ಪರಿಸ್ಥಿತಿ ಬಂದರೆ ಸೈನಿಕರು ಆರು ತಿಂಗಳು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಎದುರಾಳಿಗಳನ್ನು ಮೆಟ್ಟಲು ಆರ್ಎಸ್ಎಸ್ ಮೂರೇ ದಿನ ಸಾಕು ಎಂದು ಹೇಳಿದ್ದರು.

ನಮ್ಮದು ಸೈನಿಕರ ಸಂಘಟನೆಯಲ್ಲ. ಆದರೆ ಸೈನಿಕರಂತೆ ನಾವು ಕೂಡ ಶಿಸ್ತನ್ನೇ ಇಟ್ಟುಕೊಂಡಿದ್ದೇವೆ. ನಮ್ಮಲ್ಲಿ ಏನೇ ಮಾಡಬೇಕೆಂದರೂ ಸಂವಿಧಾನದ ಚೌಕಟ್ಟಿನಲ್ಲೇ ಮಾಡಬೇಕು. ಸೈನಿಕರಂತೆ ನಾವು ನೇರವಾಗಿ ಸಶಸ್ತ್ರಗಳನ್ನು ಹಿಡಿದುಕೊಂಡು ರಣರಂಗಕ್ಕೆ ನುಗ್ಗಲು ಸಾಧ್ಯವಿಲ್ಲ.
ಆದರೆ ನಮ್ಮ ಸೈನ್ಯ ಎದುರಾಳಿಗಳನ್ನು ಎದುರಿಸಲು ಆರು ತಿಂಗಳು ಪೂರ್ವಸಿದ್ದತೆ ಮಾಡಿಕೊಳ್ಳುತ್ತದೆ. ನಮ್ಮನ್ನು ಕೇಳಿದರೆ ಮೂರೇ ದಿನದಲ್ಲಿ ನಾವು ಸಜ್ಜಾಗುತ್ತವೆ. ನಾವು ಕೂಡ ಸೈನಿಕರಂತೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಮರ್ಥರಾಗಿದ್ದೇವೆ ಎಂದು ಹೇಳಿದ್ದಾರೆ.

ರಾಹುಲ್ ಖಂಡನೆ:
ಮೋಹನ್ ಭಾಗವತ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಾಗವತ್ ಅವರೇ ನಿಮಗೆ ನಾಚಿಕೆಯಾಗಬೇಕು. ಸೈನಿಕರೆಲ್ಲಿ , ಆರ್ಎಸ್ಎಸ್ ಎಲ್ಲಿ? ಈ ಮೂಲಕ ನೀವು ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಹುತಾತ್ಮರಿಗೆ ಅವಮಾನ ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ.
ಸೈನಿಕರಿಗೆ ಅಪಮಾನ ಮಾಡಿರುವ ನೀರು ಮೊದಲು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಬಿಜೆಪಿ ಮಾತ್ರ ಸಂಘದ ಬೆಂಬಲಕ್ಕೆ ನಿಂತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ