ಬ್ರಿಟಿಷರ ಕಾಲದ ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಿದ್ದ ಮೂವರು ಕಾರ್ಮಿಕರ ಬಂಧನ

ಮೈಸೂರು, ಫೆ.11-ಬ್ರಿಟಿಷರ ಕಾಲದ ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಿದ್ದ ಮೂವರು ಕಾರ್ಮಿಕರನ್ನು ಬೆಟ್ಟದಪುರ ಪೆÇಲೀಸರು ಬಂಧಿಸಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಮರಟಕೊಪ್ಪಲು ಗ್ರಾಮದ ನಿವಾಸಿಗಳಾದ ದೇವೇಗೌಡ, ತ್ಯಾಗರಾಜು ಹಾಗೂ ವಿಶ್ವನಾಥ್ ಬಂಧಿತ ಕಾರ್ಮಿಕರು.

ಪಿರಿಯಾಪಟ್ಟಣ ತಾಲ್ಲೂಕಿನ ಹರಿಣಗ್ರಾಮದ ನಿವಾಸಿ ಕಲ್ಲೇಗೌಡ ಎಂಬುವರು ಬಸವೇಶ್ವರ ರಸ್ತೆಯಲ್ಲಿರುವ ಹಳೆಯ ಮನೆಯನ್ನು ಮರು ನಿರ್ಮಾಣ ಮಾಡಲು ಅಡಿಪಾಯ ತೆಗೆಯಲು ಈ ಕಾರ್ಮಿಕರಿಗೆ ಸೂಚಿಸಿದ್ದರು. ಈ ವೇಳೆ ಪಾಯ ತೆಗೆಯುವ ಸಂದರ್ಭದಲ್ಲಿ ಮಡಿಕೆಯೊಂದು ದೊರೆತಿದ್ದು , ಅದರಲ್ಲಿ ಬ್ರಿಟಿಷರ ಕಾಲದ ರಾಣಿ ವಿಕ್ಟೋರಿಯ ಭಾವಚಿತ್ರವಿರುವ 140 ಬೆಳ್ಳಿ ನಾಣ್ಯಗಳು ಕಂಡುಬಂದಿವೆ.
ಕಾರ್ಮಿಕರು ಮನೆ ಮಾಲೀಕರಿಗೆ ಈ ವಿಷಯ ತಿಳಿಸದೆ ನಾಣ್ಯಗಳನ್ನು ತೆಗೆದುಕೊಂಡು ಹೋಗಿ ಒಂದು ನಾಣ್ಯಕ್ಕೆ 450 ರೂ.ಗಳನಂತೆ ಮಾರಾಟ ಮಾಡಿದ್ದಾರೆ.

ಇದರಿಂದ ಬಂದ ಹಣವನ್ನು ಮೂವರು ಸಮವಾಗಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಮೂವರು ಕಾರ್ಮಿಕರು ಹಣವನ್ನು ದುಂದುವೆಚ್ಚ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪೆÇಲೀಸರಿಗೆ ತಿಳಿಸಿದ್ದಾರೆ. ಪೆÇಲೀಸರು ಕಾರ್ಮಿಕರನ್ನು ವಿಚಾರಣೆಗೊಳಪಡಿಸಿದಾಗ ಬ್ರಿಟಿಷರ ಕಾಲದ ನಾಣ್ಯಗಳು ದೊರಕಿದ್ದು , ಅದನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ಕಾರ್ಮಿಕರು ನೀಡಿದ ಮಾಹಿತಿ ಮೇರೆಗೆ ಬೆಟ್ಟದಪುರ ಠಾಣೆ ಪೆÇಲೀಸರು ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಫೋಟೋ ಕ್ರೆಡಿಟ್: clickbd.com(ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ