ಐಟಂ ನಟಿ ರಾಖಿಸಾವಂತ್ ಕ್ರಿಕೆಟ್ ಅಂಗಳದತ್ತ ಹರಿಸಿದ್ದಾರೆ

ತನ್ನ ಮಾದಕ ನೃತ್ಯಗಳಿಂದಲೇ ಗಮನ ಸೆಳೆದಿರುವ ಐಟಂ ನಟಿ ರಾಖಿಸಾವಂತ್ ಸದಾ ಸುದ್ದಿಯಲ್ಲಿರಲು ಇಷ್ಟಪಡುವ ವಿವಾದಿತ ತಾರೆ. ಇದಕ್ಕಾಗಿಯೇ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಖಿ ಈಗ ಕ್ರಿಕೆಟ್ ಅಂಗಳದತ್ತಲೂ ದೃಷ್ಟಿ ಹರಿಸಿದ್ದಾರೆ.

ಅರೆ… ರಾಖಿ ಕ್ರಿಕೆಟ್ ಬಗ್ಗೆ ಮಾಡಿದ ಕಾಮೆಂಟ್ ಏನೆಂದು ಅಂದುಕೊಂಡೀರಾ…! ಆದರೆ ಈಗ ಮಾತನಾಡಿಲ್ಲ ಬದಲಿಗೆ ಮುಂಬರುವ ಬಾಕ್ಸ್ ಕ್ರಿಕೆಟ್ ಲೀಗ್ (ಬಿಸಿಎಲ್)ನಲ್ಲಿ ಗೋವಾ ಶಾಕ್ರ್ಸ್ ತಂಡದ ಪ್ರತಿನಿಧಿಯಾಗಿದ್ದಾರೆ.

ಬಾಕ್ಸ್ ಕ್ರಿಕೆಟ್ ಲೀಗ್ ಕಳೆದ ಕೆಲವು ವರ್ಷಗಳಿಂದ ಕ್ರೇಜ್ ಹುಟ್ಟಿಸಿದ್ದು ಈಗ ಮಾದಕ ಬೆಡಗಿ, ಕುಡಿನೋಟದ ಕಣ್ಮಣಿ ರಾಖಿ ಸಾವಂತ್ ಅವರು ಕೂಡ ಸೇರ್ಪಡೆಯಾಗಿರುವುದರಿಂದ ಅದರ ರಂಗು ಮತ್ತಷ್ಟು ಏರತೊಡಗಿದೆ.

ಈ ಕುರಿತು ಮಾತನಾಡಿರುವ ರಾಖಿ ಸಾವಂತ್, ಮಹಿಳೆಯರು ಗೊಂಬೆಗಳೊಂದಿಗೆ ಆಟ, ಅಡುಗೆಮನೆಯಲ್ಲಿ ಆಹಾರ ತಯಾರಿ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲಬೇಕಾಗಿಲ್ಲ , ನಮ್ಮಲ್ಲಿ ಉತ್ತಮ ಮಹಿಳಾ ಕ್ರಿಕೆಟ್ ತಂಡವಿದ್ದರೂ ಕೂಡ ಪುರುಷರ ಕ್ರಿಕೆಟ್‍ಗೆ ದೊರೆಯುವಂತಹ ಪೆÇ್ರೀ ಲಭಿಸದಿರುವುದು ವನಿತೆಯರ ಆತ್ಮವಿಶ್ವಾಸವನ್ನು ಕುಗ್ಗಿಸುವಂತಿದೆ. ಇನ್ನೂ ಮುಂದಾದರೂ ಪುರುಷರು ಮಹಿಳಾ ಕ್ರಿಕೆಟಿಗರನ್ನು ಪೆÇ್ರೀ ಅಂದರು.

ಈ ಹಿಂದೆ ನಾನು ನಟಿಸಿದ್ದ ದಿಲ್ ಬೋಲೆ ಅಡಿಪ್ಪಾದಲ್ಲಿ ನಾನು ಕ್ರಿಕೆಟ್ ಆಟಗಾರರನ್ನು ಪೆÇ್ರೀ ಪಾತ್ರದಲ್ಲಿ ನಟಿಸಿದ್ದೇನೆ. ಈಗ ಬಿಸಿಎಲ್ ಕ್ರಿಕೆಟ್‍ನಲ್ಲಿ ಒಬ್ಬ ಆಟಗಾರ್ತಿಯಾಗಿ ಆಡುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
ನಟ, ನಟಿಯರು ಕೂಡಿಕೊಂಡು ಆಡುವ ಬಾಕ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಗಳು ಒಳಾಂಗಣದಲ್ಲಿ ನಡೆಯಲಿದ್ದು ರಾಖಿ ತನ್ನ ವೈಯ್ಯಾರದಿಂದ ಪ್ರೇಕ್ಷಕರನ್ನು ರಂಜಿಸುವುದಂತೂ ದಿಟ.

ಫೋಟೋ ಕ್ರೆಡಿಟ್: wikimedia.org (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ