ಬಹಮನಿ ಸುಲ್ತಾನರ ಉತ್ಸವ ನಡೆಸಲು ಮುಂದಾಗಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು – ಕರ್ನಾಟಕ ನವನಿರ್ಮಾಣ ಸೇನೆ

ಕಲಬುರಗಿ, ಫೆ.10-ರಾಜ್ಯಸರ್ಕಾರ ಹಾಗೂ ಕಲಬುರಗಿ ಜಿಲ್ಲಾಡಳಿತ ವತಿಯಿಂದ ಮಾರ್ಚ್ 6 ರಂದು ಕಲಬುರಗಿಯಲ್ಲಿ  ಬಹಮನಿ ಸುಲ್ತಾನರ ಉತ್ಸವ ನಡೆಸಲು ಮುಂದಾಗಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೇನೆ ಅಧ್ಯಕ್ಷ ಪ್ರಶಾಂತ್‍ಗೌಡ, ಬಹಮನಿ ಸುಲ್ತಾನರ ಇತಿಹಾಸ ಅಭ್ಯಾಸ ಮಾಡಿದವರಿಗೆ ಅವರ ಕ್ರೂರತೆ, ಆಡಳಿತದ ಭೀಕರತೆ ಬಗ್ಗೆ ತಿಳಿಯುತ್ತದೆ. ಇದೇ ಕಲಬುರಗಿಯ ಮಳಖೇಡ  ಎಂಬ ಪ್ರದೇಶ ಈ ಹಿಂದೆ ರಾಷ್ಟ್ರಕೂಟರ ರಾಜಧಾನಿಯಾಗಿತ್ತು ಎಂಬುದು ಸರ್ಕಾರದ ನೆನಪಿನಲ್ಲಿದೆ ಎಂದು ಭಾವಿಸುತ್ತೇವೆ. ದಿಢೀರನೆ ರಾಜ್ಯಸರ್ಕಾರ ಹಾಗೂ ಕಲಬುರಗಿ ಜಿಲ್ಲಾಡಳಿತ ಇತಿಹಾಸ ಪ್ರೇಮ ಪ್ರದರ್ಶಿಸಲು ಮುಂದಾಗಿದ್ದು, ಈ ಇತಿಹಾಸ ಪ್ರೇಮ ಕನ್ನಡದ್ದಾಗಿರಬೇಕೇ ಹೊರತು  ನಾಡಿನ ಸಂಸ್ಕøತಿಯ ಮೇಲೆ ದಾಳಿ ಮಾಡಿದ ದಾಳಿಕೋರರ ಮೇಲೆ ಅಲ್ಲ ಎಂದು ಹೇಳಿದರು.

ಕಲಬುರಗಿ ಜನತೆಯ ದೇಹದಲ್ಲಿ ನಿಜವಾಗಿ ಕನ್ನಡದ ರಕ್ತವೇ ಹರಿಯುತ್ತಿದ್ದರೆ ಈ ಉತ್ಸವವನ್ನು ನಡೆಸದೆ ಹಿಂದೆ ಸರಿಯಬೇಕು. ಇಲ್ಲವಾದರೆ ಈ ಹಿಂದೆ ನಿಜಾಮರ ಸೈನಿಕರು ಶಿವಶರಣರ ಪೂಜೆ ಭಂಗಗೊಳಿಸಲು ಹಾವು-ಚೇಳುಗಳನ್ನು ಬಿಡುತ್ತಿದ್ದರು, ಅದೇ ಮಾದರಿಯಲ್ಲಿ ಸೇನೆ ಕಾರ್ಯಕರ್ತರು ಅಂದು ವೇದಿಕೆ ಮೇಲೆ ಹಾವು-ಚೇಳು ಬಿಟ್ಟು ಉತ್ಸವವನ್ನು ತಡೆಯುತ್ತೇವೆ ಎಂದು ಎಚ್ಚರಿಸಿದ್ದಾರೆ

ಫೋಟೋ ಕ್ರೆಡಿಟ್: oneindiaonepeople.com (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ