ಫೆಂಟಾ ಚುಚ್ಚುಮದ್ದು ಪಡೆದು ಎರಡು ಹಸುಗೂಸುಗಳ ಮೃತ್ಯು

ಮಂಡ್ಯ, ಫೆ.11-ಚಿಕ್ಕಮಂಡ್ಯದ ಚಿಂದಗಿರಿದೊಡ್ಡಿ ಗರೀಬಿ ಕಾಲೋನಿಯಲ್ಲಿ ನಿನ್ನೆ ಫೆಂಟಾ ಚುಚ್ಚುಮದ್ದು ಪಡೆದು ಮೃತಪಟ್ಟಿದ್ದ ಎರಡು ಹಸುಗೂಸುಗಳ ದೇಹಗಳನ್ನು ಇಂದು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ನಿನ್ನೆ ಬೆಳಗ್ಗೆ ಗೋಪಾಲಪುರದಲ್ಲಿ ಮಕ್ಕಳಿಗೆ ಫೆಂಟಾ ಚುಚ್ಚುಮದ್ದು ನೀಡಲಾಗಿತ್ತು. ಒಂದು ವೈಲ್‍ನಲ್ಲಿ 10 ಮಕ್ಕಳಿಗೆ ಚುಚ್ಚುಮದ್ದು ನೀಡಬಹುದು. ಗೋಪಾಲಪುರದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ, ಚಿಂದಗಿರಿಯ ಗರೀಬಿ ಕಾಲೋನಿಯಲ್ಲಿ ಎರಡು ಹಸುಗೂಸುಗಳು ಮೃತಪಟ್ಟು, ಮತ್ತೆ ಕೆಲವು ಮಕ್ಕಳು ಅಸ್ವಸ್ಥಗೊಂಡಿವೆ. ಇದು ಹೇಗೆ ಸಾಧ್ಯ ಎಂದು ತಿಳಿಯದಾಗಿದೆ. ಅದಕ್ಕಾಗಿ ಪೆÇೀಷಕರ ಮನವೊಲಿಸಿ ಮಕ್ಕಳ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯಿಂದ ಸಾವಿಗೆ ನಿಖರ ಕಾರಣ ತಿಳಿಯಬಹುದಾಗಿದೆ ಎಂದು ಡಿಎಚ್‍ಒ ಡಾ.ಮೋಹನ್ ಹಾಗೂ ಆರೋಗ್ಯ ಆಯುಕ್ತ ಡಾ.ಕೃಷ್ಣ ತಿಳಿಸಿದ್ದಾರೆ.

ಫೋಟೋ ಕ್ರೆಡಿಟ್: npr.org (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ