ಬರೀ ಟೀಕೆಯಲ್ಲೇ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ತಲೆತಿರುಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು

ಬೆಂಗಳೂರು, ಫೆ.11- ಒಂದು ದಿನವೂ ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡದೆ ಬರೀ ಟೀಕೆಯಲ್ಲೇ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ತಲೆತಿರುಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ವ್ಯಂಗ್ಯವಾಡಿದರು.
ಗಾಂಧಿನಗರದ ಸ್ಲಂನಲ್ಲಿ ಕಳೆದ ರಾತ್ರಿ ವಾಸ್ತವ್ಯ ಹೂಡಿ ಸ್ಥಳೀಯರ ಪರಿಸ್ಥಿತಿಯನ್ನು ಅವಲೋಕಿಸಿ ಅವರೊಂದಿಗೆ ಉಪಹಾರ ಸೇವಿಸಿ, ಸ್ಲಂ ದೌರ್ಬಾಗ್ಯ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಈ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್‍ನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಇಲ್ಲಿಗೆ ಬರಲಿಲ್ಲ. ಜನರ ಸಮಸ್ಯೆಗಳನ್ನು ಅರಿಯುವುದನ್ನು ಬಿಟ್ಟು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.
ದಲಿತರಿಗೆ ನ್ಯಾಯ ದೊರಕಿಸಿಕೊಟ್ಟ ಸಂವಿಧಾನ ಶಿಲ್ಪಿ , ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾನಾಯಕ ಜಗಜೀವನರಾಮ್ ಅವರ ಅಪಮಾನ ಮಾಡಿದ್ದು ಕೂಡ ಇದೇ ಕಾಂಗ್ರೆಸ್‍ನವರು. ಆದರೆ ಇಂದು ದಲಿತರ ಪರ ಮಾತನಾಡುತ್ತಾರೆ ಎಂದು ಟೀಕಿಸಿದರು.
ಇಂಥವರಿಂದ ನಾವು ನೀತಿ ಪಾಠ ಕಲಿಯುವ ಅಗತ್ಯವಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ಎಲ್ಲರಿಗೂ ಸೂರು ಒದಗಿಸುವ ಸಂಕಲ್ಪ ತೊಟ್ಟಿದೆ. 2020ರ ವೇಳೆಗೆ ಸುಮಾರು ಎರಡು ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಹಾಕಿಕೊಂಡಿದೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಶಿಕ್ಷಣ ಹಾಗೂ ಜೀವನ ಭದ್ರತೆ ನೀಡುವ ಯೋಜನೆ ಮಾಡಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲೇ ತೊಡಗಿದೆ. ತಲೆತಿರುಕರಂತೆ ಮಾತನಾಡುತ್ತಾರೆ ಎಂದು ಆರೋಪಿಸಿದರು.

ಸ್ಲಂ ನಿವಾಸಿಗಳ ಸಮಸ್ಯೆಯನ್ನು ನಿವಾರಿಸುವುದು ಆದ್ಯಕರ್ತವ್ಯ. ಇವರಿಗೆ ಶುದ್ದ ಕುಡಿಯುವ ನೀರು, ಆರೋಗ್ಯ ಸೇವೆ ಸಿಗಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ನೀಡಿರುವ ಅನುದಾನ ಸದ್ಬಳಕೆಯಾಗಬೇಕು. ಕೇವಲ ಪೆÇೀಸ್ಟರ್‍ಗಳನ್ನು ಹಾಕಿ ಜಾಹಿರಾತು ನೀಡಿದರೆ ಸಾಲದು, ಇಚ್ಛಾಶಕ್ತಿ ಇರಬೇಕು ಎಂದು ಹೇಳಿದರು.

ಕಳೆದ ರಾತ್ರಿ ಸ್ಲಂ ನಿವಾಸಿಗಳೊಂದಿಗೆ ಮಲಗಿ ಬೆಳಗ್ಗೆ ಎದ್ದು ದಿನಪತ್ರಿಕೆ ಓದಿ, ಮುನಿರತ್ನಂ ಎಂಬುವರ ಮನೆಯಲ್ಲಿ ಕಾಫಿ ಕುಡಿದರು. ಇಡ್ಲಿ , ಉಪ್ಪಿಟ್ಟು ಉಪಹಾರ ಸೇವಿಸಿದರು.

ಯಡಿಯೂರಪ್ಪ ಅವರ ಜೊತೆ ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಮಾಜಿ ಡಿಸಿಎಂ ಆರ್.ಅಶೋಕ್, ಕಟ್ಟಾಸುಬ್ರಹ್ಮಣ್ಯ ನಾಯ್ಡು , ಸಂಸದ ಪಿ.ಸಿ.ಮೋಹನ್ ಮತ್ತಿತರರು ಇದ್ದರು.
ಇದೇ ವೇಳೆ ಮಾಧ್ಯಮದವರ ಜೊತೆ ಪತ್ರಿಕೆಯನ್ನು ಓದಿ ಆರ್.ಅಶೋಕ್ ಭವಿಷ್ಯದ ಕಾಲಂ ನೋಡಿ ಎಲ್ಲರಿಗೂ ಅದನ್ನು ಓದಿ ಹೇಳಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಮನೆಯವರಿಗೆ ಸೀರೆ, ರವಿಕೆ, ಪಂಚೆÉ, ಶರ್ಟ್ ಮತ್ತಿತರ ವಸ್ತುಗಳನ್ನು ನೀಡಿ ಅವರಿಗೆ ಧನ್ಯವಾದ ಹೇಳಿದರು.

ಫೋಟೋ ಕ್ರೆಡಿಟ್: thehindu.com

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ