ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಜನಾಶೀರ್ವಾದ ಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ

ಕೊಪ್ಪಳ: ಕಾಂಗ್ರೇಸ್ ನ ಚುನಾವಣಾ ಪ್ರಚಾರ ಎಂದೇ ಬಿಂಬಿತವಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಜನಾಶೀರ್ವಾದ ಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.

ಯಾತ್ರೆ ಅಂಗವಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಬಹಿರಂಗ ಸಮಾವೇಶ ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ವಿಶೇಷವಾಗಿ ಮೋದಿ ಬಗ್ಗೆ ಮಾತನಾಡಿದ ಅವರು, ಮೋದಿಯವರೇ ಕಳೆದ ಬಾರಿ ಕರ್ನಾಟಕದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ವರ್ಲ್ಡ್‌ ರೆಕಾರ್ಡ್ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ೩ ಜನ ಸಿಎಂ ಆದ್ರು, ೪ ಜನ ಮಂತ್ರಿಗಳು ಜೈಲಿಗೆ ಹೋದ್ರು, ೧೧ ಜನ ರಾಜೀನಾಮೆ ನೀಡಿದ್ರು. ಭ್ರಷ್ಟಾಚಾರದ ಬಗ್ಗೆ ಮಾತಾಡೋ ನಿಮಗೆ ಇದು ಕಾಣಲ್ವಾ ಅಂತ ಪ್ರಶ್ನೆ ಮಾಡಿದ್ರು. ಇಂದು ನಾವು ಎರಡು ಬಗೆಯ ಸರ್ಕಾರಗಳನ್ನು ನೋಡ್ತೀದ್ದೀವಿ. ಒಂದು ರೈತರಿಗಾಗಿ ಬಡವರಿಗಾಗಿ ಕೆಲಸ ಮಾಡ್ತಿರೋ ಸಿದ್ದರಾಮಯ್ಯರ ಸರ್ಕಾರ, ಇನ್ನೊಂದು ಬಂಡವಾಳಶಾಹಿಗಳ ಪರವಾಗಿರೋ ಮೋದಿ ಸರ್ಕಾರ. ರೈತರ ಸಾಲ ಮನ್ನಾ ಮಾಡಿ ಅಂದ್ರೆ ಮೋದಿ ಸರ್ಕಾರ ಮಾಡ್ಲಿಲ್ಲ. ಆದ್ರೆ ೧ ಲಕ್ಷ ೩೦ ಸಾವಿರ ಕೋಟಿ ರೂಪಾಯಿಗಳ ೧೦ ಜನ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದೆ. ಹೀಗಾಗಿ ನಮ್ಮ ಸರ್ಕಾರ ಏನೇ ಕೆಲಸ ಮಾಡಿದ್ರೂ ಅದು ಜನರ ಹಿತಕ್ಕಾಗಿ ಮಾಡ್ತೀವಿ. ಮೋದಿ ಸರ್ಕಾರ ಏನೇ ಮಾಡಿದ್ರೂ ಅದು ಬಂಡವಾಳಶಾಹಿಗಳ ಪರವಾಗಿ ಮಾಡಿತ್ತೆ. ಹೈದ್ರಾಬಾದ್ ಕರ್ನಾಟಕ ಭಾಗದ ಅಭಿವೃದ್ದಿಗಾಗಿ ೩೭೧ ಜೆ ಕಲಂ ಜಾರಿಗೆ ತಂದದ್ದು ನಾವು. ಇದ್ರಿಂದ ವರ್ಷಕ್ಕೆ ೩೫೦ ಕೋಟಿಯಷ್ಟು ಬರ್ತಿದ್ದ ಅನುದಾನ ಈಗ ೪ ಸಾವಿರ ಕೋಟಿ ಬರುತ್ತೆ. ಇಂತಹ ಅಭಿವೃದ್ಧಿಗಾಗಿ ಮುಂಬರೋ ಚುನಾವಣೆಯಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತನ್ನಿ. ಎಲ್ಲರೂ ಒಂದಾಗಿ ನಿಮಗಾಗಿ ಕೆಲಸ ಮಾಡ್ತೀವಿ ಅಂದ್ರು. ಕುಷ್ಟಗಿಯ ಪಿಡಬ್ಲ್ಯೂಡಿ ಕಚೇರಿ ಬಳಿಯ ಮೈದಾನದಲ್ಲಿ ಸಮಾವೇಶ ನಡೆಯಿತು. ಭಾಷಣಕ್ಕೂ ಮುನ್ನಾ ರಾಹುಲ್ ಗಾಂಧಿ ಕೈಸೆ ಹೋ, ಸಬ್ ಟೀಕ್ ಹೈ ಅಂತ ಭಾಷಣ ಆರಂಭಿಸಿದ್ದು ವಿಶೇಷವಾಗಿತ್ತು.

ಫೋಟೋ ಕ್ರೆಡಿಟ್: thehindu.com(ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ